ಬೆಂಗಳೂರು: ಸಿಎಂ ಸಿದ್ದರಾಮಯ್ಯ 14 ಮುಡಾ ಸೈಟ್‌ಗಳನ್ನು ಜಲದರ್ಶಿನಿ ಗೆಸ್ಟ್ ಹೌಸ್‌ನಲ್ಲಿ ಸಬ್ ರಿಜಿಸ್ಟರ್ ಕರೆದುಕೊಂಡು ಬಂದು ಒಂದೇ ದಿನದಲ್ಲಿ ಸಿದ್ದರಾಮಯ್ಯ ಪತ್ನಿ ಹೆಸರಿಗೆ ರಿಜಿಸ್ಟರ್ ಮಾಡಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದರು.
ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಮುಡಾ ಕೇಸ್‌ನಲ್ಲಿ ಸಿಎಂಗೆ 62 ಕೋಟಿ ಕೊಡಬೇಕಂತೆ. ಯಾರಪ್ಪನ ಆಸ್ತಿ ಅಂತಾ ಕೊಡಬೇಕು ಸಿಎಂ ಅವರೇ? ಆ ಜಮೀನು ಸಿದ್ದರಾಮಯ್ಯ ಪಿತ್ರಾರ್ಜಿತ ಆಸ್ತಿನಾ, ಸಿದ್ದರಾಮಯ್ಯ ಹೆಂಡತಿ ತಮ್ಮನ ಪಿತ್ರಾರ್ಜಿತ ಆಸ್ತಿನಾ ಎಂದು ವಾಗ್ದಾಳಿ ನಡೆಸಿದರು.
ಮುಡಾ ಅಕ್ರಮದ ಕುರಿತು ದಾಖಲಾತಿ ತೋರಿಸಿ ಅಕ್ರಮದ ಬಗ್ಗೆ ಕಿಡಿಕಾರಿದರು. ಮುಡಾ ಪ್ಲ್ಯಾನ್ ಆಗಿದ್ದು ಯಾವಾಗ? ಭೂಮಿ ಖರೀದಿ ಮಾಡಿದ್ದು ಯಾವಾಗ? ಯಾವ ಯಾವ ವರ್ಷದಲ್ಲಿ ಏನೆಲ್ಲ ಆಯ್ತು ಅಂತಾ ದಾಖಲಾತಿ ಸಮೇತ ಬಿಚ್ಚಿಟ್ಟರು.
ಸಿದ್ದರಾಮಯ್ಯ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಈ ಅಕ್ರಮ ಎಸಗಿದ್ದಾರೆ. ಈಗ ತಮ್ಮ ಮೇಲೆ ಆರೋಪ ಬಂದಿರೋದಕ್ಕೆ ನಾನು ಹಿಂದುಳಿದ ವರ್ಗದವನು ನಾನು ಸಿಎಂ ಆಗಿದ್ದು ವಿಪಕ್ಷಗಳಿಗೆ ತಡೆಯೋಕೆ ಆಗದೇ ಆರೋಪ ಮಾಡ್ತಿದ್ದಾರೆ ಅಂತ ಹೇಳುತ್ತಾರೆ. ಹಿಂದುಳಿದವರಿಗೆ ಇವರು ಏನು ಮಾಡಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

