News Karnataka Kannada
Saturday, May 04 2024
ಬೆಂಗಳೂರು

ಬೆಂಗಳೂರು ರಸ್ತೆಯಲ್ಲಿ ಕಾಣಿಸಿಕೊಂಡ ಟೆಸ್ಲಾ ಕಾರು: ಫೋಟೊ ವೈರಲ್

Tesla car spotted on Bengaluru road, photo goes viral
Photo Credit : News Kannada

ಬೆಂಗಳೂರು: ಅಮೆರಿಕದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಟೆಸ್ಲಾ ಕಾರು, ಭಾರತಕ್ಕೆ ಬರುವ ಬಗ್ಗೆ ಊಹಾಪೋಹಗಳಿವೆ. ಭಾರತದಲ್ಲಿ ಟೆಸ್ಲಾ ಕಾರು ಬಂದರು, ಅಮೆರಿಕದಂತೆ ಸ್ವಯಂಚಾಲಿತ ವಾಹನವಾಗಿರದೆ, ಚಾಲಕ ಸಹಿತ ಕಾರು ಬಿಡುಗಡೆ ಮಾಡುವುದಾಗಿ ಟೆಸ್ಲಾ ಹೇಳಿದೆ.

ಟೆಸ್ಲಾ ಕಾರು ಉತ್ಪಾದನ ಘಟಕ ಭಾರತಕ್ಕೆ ಬರುವ ಸುದ್ದಿಯ ನಡುವೆಯೇ ಬೆಂಗಳೂರಿನ ರಸ್ತೆಯಲ್ಲಿ ಟೆಸ್ಲಾ ಕಾರೊಂದು ಕಾಣಿಸಿಕೊಂಡಿದ್ದು, ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.

ಬೆಂಗಳೂರಿನ ರಸ್ತೆಯೊಂದರಲ್ಲಿ ಕೆಂಪು ಟೆಸ್ಲಾ ಮಾಡೆಲ್ ಎಕ್ಸ್ ಎಸ್‌ಯುವಿ ಕಂಡುಬಂದಿದೆ. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಸಮೀಪವಿರುವ ಮಿನ್ಸ್ಕ್ ಸ್ಕ್ವೇರ್ ಬಳಿ ಟೆಸ್ಲಾ ಕಾರು ಚಲಿಸುವಾಗಿ ಫೋಟೊಗಳನ್ನು ಕ್ಲಿಕ್ಕಿಸಲಾಗಿದೆ.

ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಗಮನ ಸೆಳೆದಿವೆ. ಹಲವಾರು ಬಳಕೆದಾರರು ಕಾರಿನ ಬಗ್ಗೆ ಮರುಟ್ವೀಟ್ ಮತ್ತು ಕಾಮೆಂಟ್ ಮಾಡಿದ್ದಾರೆ. ಕೆಲವು ಬಳಕೆದಾರರು ಇದು ದುಬೈನಲ್ಲಿ ನೋಂದಾಯಿಸಲಾದ “ಖಾಸಗಿ ಕಾರು” ಎಂದು ಊಹಿಸಿದ್ದಾರೆ.

“ಅದು ಕಾರ್ನೆಟ್‌ನಲ್ಲಿ ದುಬೈ ನೋಂದಾಯಿತ ಟೆಸ್ಲಾ. ಕೇರಳಕ್ಕೆ ಬನ್ನಿ, ಇಲ್ಲಿ ತುಂಬಾ ಸಾಮಾನ್ಯವಾಗಿದೆ.” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು