ಬೆಂಗಳೂರು : ಕಾಮಿಡಿ ಕಿಲಾಡಿ ಶೋ ಮೂಲಕ ಮಿಂಚಿದ್ದ ಕಿರುತೆರೆ ನಟ ಮಡೆನೂರು ಮನು ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇದೀಗ ಪೊಲೀಸರು ಆರೋಪಿ ನಟನನ್ನು ಬಂಧಿಸಿದ್ದಾರೆ.
ಮನು ವಿರುದ್ಧ ಸಹ ಕಲಾವಿದೆ ಅತ್ಯಾಚಾರ ಆರೋಪ ಮಾಡಿ FIR ದಾಖಲಿಸಿದ್ದರು. ಅಲ್ಲದೇ, ಈ ದೂರಿನಲ್ಲಿ ಮನು ಎರಡು ಬಾರಿ ಅಬಾಷನ್ ಮಾಡಿಸಿದ್ದಾಗಿ ಉಲ್ಲೇಖಿಸಿದ್ದರು. ಪ್ರಕರಣ ಸದ್ದು ಮಾಡುತ್ತಿದ್ದಂತೆ ನಾಪತ್ತೆಯಾಗಿದ್ದ ಮನುನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಹಾಸನದ ಶಾಂತಿಗ್ರಾಮದಲ್ಲಿ ಬಂಧಿಸಿದ್ದಾರೆ.
ಇನ್ನು ಮನು ವೀಡಿಯೋ ರಿಲೀಸ್ ಮಾಡಿದ್ದು, ಅದರಲ್ಲಿ ನಾನು ಅವಳನ್ನು ಜೀವನ ಪೂರ್ತಿ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಅವಳಿಗೆ ಎಂದೂ ಮೋಸ ಮಾಡಲ್ಲ ಎಂದಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಅವರ ಬ್ಯಾನರ್‌ನಲ್ಲಿ ಮೂಡಿಬಂದ ಕುಲದಲ್ಲಿ ಕೀಳ್ಯಾವೋದು ಸಿನಿಮಾದಲ್ಲಿ ಮನು ನಾಯಕ ನಟನಾಗಿದ್ದಾರೆ. ನಾಳೆ ಈ ಸಿನಿಮಾ ಬಿಡುಗಡೆಯಾಗಬೇಕಿದೆ.

