ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ಜೈಲು ಪಾಲಾಗಿರುವ ದರ್ಶನ್ರನ್ನು ಇದೀಗ ಕಾಟೇರ ನಿರ್ದೇಶಕ ತರುಣ್ ಸುಧೀರ್ ಭೇಟಿಯಾಗಿದ್ದಾರೆ. ಜೈಲಿನ ತರುಣ್ ಪ್ರತ್ಯೇಕ ಕೊಠಡಿಯಲ್ಲಿ ದರ್ಶನ್ರನ್ನು ಭೇಟಿಯಾಗಿದ್ದಾರೆ.
ಇನ್ನು ತರುಣ್ ಸುಧೀರ್ ಅವರು ಆಗಸ್ಟ್ 10-11ರಂದು ಮದುವೆ ಆಗಲಿದ್ದಾರೆ. ನಟಿ ಸೋನಲ್ ಮೊಂತೇರೋ ಅವರನ್ನು ವರಿಸಲಿದ್ದಾರೆ. ತಮ್ಮ ಮದುವೆ ಆಮಂತ್ರಣವನ್ನು ದರ್ಶನ್ಗೆ ತರುಣ್ ನೀಡಿದ್ದಾರೆ ಎನ್ನಲಾಗಿದೆ. ದರ್ಶನ್ ಜೈಲಿನಲ್ಲಿ ಇರುವ ಕಾರಣ ಮದುವೆಯನ್ನು ಮುಂದಕ್ಕೆ ಹಾಕಲು ತರುಣ್ ಯೋಚಿಸಿದ್ದರು. ಆದರೆ, ಹಿರಿಯರು ಹಾಗೂ ದರ್ಶನ್ ಸಲಹೆ ಮೇರೆಗೆ ಮದುವೆಗೆ ತರುಣ್ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

