News Karnataka Kannada
Sunday, May 05 2024
ಬೆಂಗಳೂರು

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ರಿಂದ ವಿಮಾನ ಹಾರಾಟಕ್ಕೆ ಮುಹೂರ್ತ ಫಿಕ್ಸ್

kempegowda international airport
Photo Credit : Twitter

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಆಗಸ್ಟ್ 31 ರಿಂದ ಕಾರ್ಯಾಚರಣೆ ಆರಂಭಿಸಲಿದೆ. ಅಂದು ಬೆಳಿಗ್ಗೆ ಅಂತರರಾಷ್ಟ್ರೀಯ ವಿಮಾನಗಳ ಆಗಮನ, ನಿರ್ಗಮನ ಶುರುವಾಗಲಿದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಇಂದು( ಆ.21) ತಿಳಿಸಿದೆ.

‘ಟರ್ಮಿನಲ್ 2 ರಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಬೆಳಗ್ಗೆ 10:45 ಕ್ಕೆ ಪ್ರಾರಂಭವಾಗಲಿದೆ. 2023 ರ ಆಗಸ್ಟ್ 31, ರಂದು ಬೆಳಿಗ್ಗೆ 10:45 ರಿಂದ ಎಲ್ಲಾ ನಿಗದಿತ ಅಂತರರಾಷ್ಟ್ರೀಯ ವಿಮಾನಗಳು ಟರ್ಮಿನಲ್ 2 ಗೆ ಆಗಮಿಸುತ್ತವೆ ಮತ್ತು ನಿರ್ಗಮಿಸುತ್ತವೆ ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್ ‘ಎಕ್ಸ್’ ​​ನಲ್ಲಿ ಪೋಸ್ಟ್ ಮಾಡಿದೆ.

ಸಹಾಯಕ್ಕಾಗಿ ದಯವಿಟ್ಟು ನಮ್ಮ ಗ್ರಾಹಕ ಸಹಾಯವಾಣಿ ಕೇಂದ್ರವನ್ನು +91-8884998888 (WhatsApp ಮಾತ್ರ) ಮತ್ತು 080-22012001/080-66785555 ಸಂಖ್ಯೆಗಳ ಮೂಲಕ ಸಂಪರ್ಕಿಸಿ. ವಿಮಾನಗಳ ಕುರಿತ ಮಾಹಿತಿಗಾಗಿ ಬಿಎಲ್​ಆರ್ ಪಲ್ಸ್ ಅನ್ನು ಡೌನ್‌ಲೋಡ್ ಮಾಡಿ. ಈ ಮೂಲಕ ಸರತಿ ಸಾಲು, ಕಾಯುವಿಕೆ ಅವಧಿ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು ಎಂದು ಎಕ್ಸ್ ನಲ್ಲಿ ತಿಳಿಸಿದೆ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು