ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳಾದ ಡಾ. ಯತೀಂದ್ರ, ಎನ್‌.ಎಸ್‌. ಬೋಸರಾಜು, ಕೆ.ಗೋವಿಂದರಾಜು, ಬಿಲ್ಕಸ್‌ ಬಾನು, ಐವನ್‌ ಡಿಸೋಜ, ವಸಂತ ಕುಮಾರ್‌, ಜಗದೇವ್‌ ಗುತ್ತೇದಾರ್‌ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆರಿರುವ ಡಿ.ಕೆ ಶಿವಕುಮಾರ್‌, ಸಚಿವರುಗಳು ಇದ್ದರು.

ನಾಮಪತ್ರ ಸಲ್ಲಿಕೆ ನಮತರ ಮಾತನಾಡಿದ ಮುಖ್ಯಮಂತ್ರಿ, ʻಎಕ್ಸಿಟ್‌ ಪೋಲ್‌ ನರೇಂದ್ರ ಮೋದಿ ಫ್ಯಾಂಟಸಿ ಪೋಲ್‌. ನಾವು ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಕರ್ನಾಟಕದಲ್ಲಿ ನಾವು 15 ರಿಂದ 20 ಸ್ಥಾನ ಗೆಲ್ಲುತ್ತೇವೆ. ಸಮೀಕ್ಷೆಯಲ್ಲಿ ಸಂಪೂರ್ಣ ತಳ್ಳಿ ಹಾಕುತ್ತೇವೆʼ ಎಂದರು.