ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ವಿಚಾರಕ್ಕೆ ಸಂಬಂಧಪಟ್ಟಂತೆ ಜೈಲು ಅಧಿಕಾರಿಗಳ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ನಟ ದರ್ಶನ್ ಜೈಲು ಫೋಟೋ ವೈರಲ್ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿರುವ ಸರ್ಕಾರ, ಈಗಾಗಲೇ 9 ಅಧಿಕಾರಿಗಳನ್ನು ಗೃಹ ಇಲಾಖೆ ಅಮಾನತು ಮಾಡಿದ್ದು, ಕರ್ತವ್ಯ ಲೋಪ ಎಸಗಿದವರ ಸ್ಥಳಕ್ಕೆ ಬೇರೆ ಅಧಿಕಾರಿಗಳ ನೇಮಕಕ್ಕೆ ಆದೇಶಿಸಿದೆ.
ಅಧಿಕಾರಿಗಳ ಅಮಾನತು ಬೆನ್ನಲ್ಲೇ ಕಾರಾಗೃಹ ಡಿಐಜಿ ಸೋಮಶೇಖರ್ ಜಾಗಕ್ಕೆ ನೂತನ ಕಾರಾಗೃಹ ಡಿಐಜಿಪಿಯಾಗಿ ಮೈಸೂರು ಕಾರಗೃಹ ಅಕಾಡೆಮಿ ಡಿಐಜಿಯಾಗಿದ್ದ ದಿವ್ಯಶ್ರೀ ಅವರನ್ನು ಹಾಗೂ ಕೇಂದ್ರ ಕಾರಗೃಹ ಮುಖ್ಯ ಅಧೀಕ್ಷಕ ವಿ. ಶೇಷಮೂರ್ತಿ ಅಮಾನತು ಬೆನ್ನಲ್ಲೇ ಜೈಲಿನ ಮುಖ್ಯ ಅಧೀಕ್ಷಕರಾಗಿ ಕೆ.ಸುರೇಶ್ ಎಂಬುವವರನ್ನು ಸರ್ಕಾರ ನೇಮಕ ಮಾಡಿದೆ.

