News Karnataka Kannada
Saturday, April 13 2024
Cricket
ಬೆಂಗಳೂರು

ಸೋನು ಗೌಡ ಕೇಸ್: ಪೋಷಕರ ಕೌನ್ಸಿಲಿಂಗ್‌ಗೆ ಮುಂದಾದ ಮಕ್ಕಳ ಹಕ್ಕು ಆಯೋಗ

ಸೋನು ಶ್ರೀನಿವಾಸ್ ಗೌಡ  ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆ ತಾಯಿಯನ್ನು  ಕೌನ್ಸಿಲಿಂಗ್ ಮಾಡಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿದೆ.
Photo Credit : NewsKarnataka

ಬೆಂಗಳೂರು: ಸೋನು ಶ್ರೀನಿವಾಸ್ ಗೌಡ  ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆ ತಾಯಿಯನ್ನು  ಕೌನ್ಸಿಲಿಂಗ್ ಮಾಡಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿದೆ.

ಮಗು ಸದ್ಯ ಬಾಲಿಕ ಆಶ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ನಿಗಾದಲ್ಲಿದೆ. ದತ್ತು ಪಡೆಯುವಾಗ ಅನುಸರಿಸಬೇಕಾದ ನಿಯಮಗಳನ್ನು ಅನುಸರಿಸಿಲ್ಲ.

ಮಗುವನ್ನು ಸೋನು ಶ್ರೀನಿವಾಸ್ ಗೌಡ ಕರೆದುಕೊಂಡು ಹೋದ ಮೇಲೆ ಪೋಷಕರು ಯಾಕೆ ದೂರು ಕೊಡಲಿಲ್ಲ? ಅವರಿಂದ ಆಮಿಷಕ್ಕೆ ಒಳಗಾಗಿದ್ರಾ ಎಂಬ ಆಯಾಮದಲ್ಲಿ ಕೌನ್ಸಿಲಿಂಗ್ ಮಾಡಿ ಮಗುವನ್ನು ರಕ್ಷಣೆ ಮಾಡೋಕೆ ಮುಂದಾಗಿದೆ.

ತಂದೆ ತಾಯಿಯನ್ನು ಕೌನ್ಸಿಲಿಂಗ್ ಮಾಡಿ ಅವರದ್ದು ತಪ್ಪು ಇದ್ದರೆ ಕ್ರಮಕ್ಕೆ ಮುಂದಾಗುತ್ತಾರೆ. ತಂದೆ ತಾಯಿ ತಪ್ಪು ಇಲ್ಲದಿದ್ದರೆ ಮಗುವನ್ನು ತಂದೆ ತಾಯಿಗೆ ವಾಪಸ್ ಒಪ್ಪಿಸಲು ತಯಾರಿ ಮಾಡುತ್ತೇವೆ ಎನ್ನುತ್ತಿದ್ದಾರೆ.

ಮಗುವನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣದಲ್ಲಿ ಸೋನು ಶ್ರೀನಿವಾಸ್ ಗೌಡ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು