ಬೆಂಗಳೂರು:  ಕಂಠಪೂರ್ತಿ ಕುಡಿದ ಬೈಕ್ ಸವಾರು ಬೆಂಗಳೂರಿನ ಸರ್ಜಾಪುರದಲ್ಲಿ 7 ತಿಂಗಳ ಮಗುವಿನ ಜೊತೆ ಸಾಗುತ್ತಿದ್ದ ದಂಪತಿ ಕಾರಿನ ಮೇಲೆ ಭೀಕರ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಈ ಪುಂಡನ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. ಬಾಗಿಲು ತೆಗಿಯೋ, ಲೇ ಎಂದು ಅವಾಚ್ಯ ಶಬ್ದಗಳಿಂದ ಬೈದ ಬೈಕ್ ಸವಾರ, ಕಾರಿನ ಗಾಜಿನ ಮೇಲೆ ದಾಳಿ ನಡೆಸಿದ್ದಾನೆ. ಕಲ್ಲಿನಿಂದ, ವೈಪರ್ ಮೂಲಕ ಭೀಕರ ದಾಳಿಗೆ ಮಗು ಹಾಗೂ ದಂಪತಿಗಳು ಭಯಭೀತರಾಗಿದ್ದಾರೆ. ಮಗುವಿದೆ ಎಂದರೂ ಕುಡಿದ ಮತ್ತಿನಲ್ಲಿ ಮತ್ತೆ ಮತ್ತೆ ದಾಳಿ ನಡೆಸಿದ್ದಾರೆ. ಮಗು ಹಾಗೂ ಮಹಿಳೆ ಚೀರಾಟ ಹಾಗೂ ಭೀಕರ ದಾಳಿ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಂಠಪೂರ್ತಿ ಕುಡಿದು ವೇಗವಾಗಿ ಬೈಕ್ ಓಡಿಸುಕೊಂಡು ಸಾಗಿದ್ದಾರೆ. ಸರ್ಜಾಪುರದ ಬಳಿಕ ದಂಪತಿಗಳ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ದಂಪತಿಗಳ ಕಾರಿನ ಮೇಲೆ ದಾಳಿಗೆ ಮುಂದಾಗಿದ್ದಾನೆ. ರಸ್ತೆಯಲ್ಲಿ ಕಾರಿನ ಮೇಲೆ ದಾಳಿ ಮಾಡಿದ ಬೈಕ್ ಸವಾರ ತನ್ನ ಶಕ್ತಿ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ಈ ಘಟನೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಇತ್ತ ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಪುಂಡನ ಅರೆಸ್ಟ್ ಮಾಡಿದ್ದಾರೆ. ಈತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

— Citizens Movement, East Bengaluru (@east_bengaluru) August 19, 2024