ಬೆಂಗಳೂರು : ಮುಂಗಾರು ಅಧಿವೇಶದನದ ಸಂದರ್ಭದಲ್ಲಿ ಸದನದಲ್ಲಿ ಆರ್‌ಎಸ್‌ಎಸ್‌ ರಾಷ್ಟ್ರಗೀತೆ ಹಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್‌  ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.

ಮಂಗಳವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಕುಟುಂಬಕ್ಕೆ ನನ್ನ ನಿಷ್ಠೆ ಅಚಲವಾದದ್ದು. ಈ ಕುರಿತು ಯಾರಿಗಾದರೂ ಮನಸಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಬಗ್ಗೆ ನನ್ನ ನಿಲುವು ಸ್ಪಷ್ಟವಾಗಿದೆ. ನಾನು ಯಾರಿಂದಲೂ ಪಾಠ ಕಲಿಯುವ ಅಗತ್ಯ ಇಲ್ಲ. 1979 ರಿಂದಲೂ ನಾನು ಪಕ್ಷದ ಬೆಂಬಲಿಗನಾಗಿದ್ದು,  ವಿದ್ಯಾರ್ಥಿ ದೆಸೆಯಿಂದಲೂ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ನನಗೆ ಯಾರಿಗೂ ಮನಸು ನೋಯಿಸಲು ಇಷ್ಟವಿಲ್ಲ. ನನ್ನ ಜೀವನೆ ಬೇರೆಯವರ ಜೀವನಕ್ಕೆ ಮೆಟ್ಟಿಲುಗಳಾಗಬೇಕು.   ಇದಕ್ಕೆ ಬೇಕಿದ್ದರೆ ಕ್ಷಮಾಪಣೆ ಕೇಳಲೂ ಸಹ ನಾನು ಸಿದ್ದ ಎಂದು ನುಡಿದರು.