ಇಂದು ಎಂ.ಎ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿ ಆಗಿವೆ. ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ಕೆ.ಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಬ್ಯಾಟಿಂಗ್ ಮಾಡಲಿದೆ.
ಇನ್ನು, ಆರ್ಸಿಬಿ ತಂಡದಿಂದ ಸ್ಟಾರ್ ಬೌಲರ್ ಅಲ್ಜಾರಿ ಜೋಸೆಫ್ಗೆ ಕೊಕ್ ನೀಡಲಾಗಿದೆ. ಇವರ ಬದಲಿಗೆ ರೀಸ್ ಟೋಪ್ಲೆಗೆ ಅವಕಾಶ ಮಾಡಿಕೊಡಲಾಗಿದೆ. ಇನ್ನು, ಲಕ್ನೋ ತಂಡದಲ್ಲಿ ಮೋಶಿನ್ ಖಾನ್ ಜಾಗಕ್ಕೆ ಯಶ್ ಠಾಕೂರ್ಗೆ ಚಾನ್ಸ್ ಸಿಕ್ಕಿದೆ