ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರಿ ಬರೋಬ್ಬರಿ 2 ತಿಂಗಳು ಕಳೆದಿವೆ. ದರ್ಶನ್ ಅಭಿಮಾನಿ ಪರಪ್ಪನ ಅಗ್ರಹಾರದ ಮುಂದೆಯೇ ಉರುಳು ಸೇವೆ ಮಾಡಲು ಮುಂದಾಗಿದ್ದಾರೆ.
ಈ ಸಂಬಂಧ ವಿಡಿಯೋ ಮಾಡಿ ಮಾತಾಡಿರೋ ನಮ್ಮ ಕರುನಾಡು ಯುವ ಸೇನೆ ರಾಜ್ಯಾಧ್ಯಕ್ಷ ರವಿಕುಮಾರ್ ಎಂಬುವರು ನಾಳೆ ದರ್ಶನ್ ಅವರನ್ನು ರಿಲೀಸ್ ಮಾಡಬೇಕು ಎಂದು ಉರುಳು ಸೇವೆ ಮಾಡುತ್ತೇವೆ. 101 ತೆಂಗಿನ ಕಾಯಿ ಹೊಡೆದು ಪರಪ್ಪನ ಅಗ್ರಹಾರದ ಜೈಲು ಮುಂದೆಯೇ ಉರುಳು ಸೇವೆ ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಡಿ ಬಾಸ್ ಅಭಿಮಾನಿಗಳು ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ.

