ಬೆಂಗಳೂರು : ಖಾಸಗಿ ಕಂಪನಿಗಳಲ್ಲಿ ರಾಜ್ಯದ ಸ್ಥಳೀಯರಿಗೆ ಅಂದರೆ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಬಗ್ಗೆ ಮಸೂದೆಗೆ ಕರ್ನಾಟಕ ಸಚಿವ ಸಂಪುಟ ಮಂಗಳವಾರ (ಜು.16) ಅನುಮೋದನೆ ನೀಡಿತ್ತು. ಆದರೆ ಇದಕ್ಕೆ ಉದ್ಯಮಿ ಮೋಹನ್​ ದಾಸ್​ ಪೈ ಸೇರಿದಂತೆ ಇನ್ನೂ ಅನೇಕ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಮಸೂದೆ ವಿಚಾರವಾಗಿ ಟ್ವೀಟ್​ ಮಾಡಿದ ಮೋಹನ್​ ದಾಸ್​ ಪೈ ಅವರು, “ಮಸೂದೆಯನ್ನು ಜಾರಿಗೆ ತರಬಾರದು. ಇದು ಸಂವಿಧಾನ ವಿರೋಧಿಯಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಟ್ವೀಟ್​ ಮಾಡಿರುವ ಅವರು, “ಖಾಸಗಿ ಕಂಪನಿಗಳಿಗೆ ನೇಮಕ ಮಾಡಿಕೊಳ್ಳುವಾಗ ಸರ್ಕಾರಿ ಅಧಿಕಾರಿಗಳು ಸಂದರ್ಶನಕ್ಕೆ ಬರುತ್ತಾರಾ? ಸಂದರ್ಶನ ಸಮಯದಲ್ಲಿ ಅವರ ಭಾಷೆಯನ್ನು ಪರೀಕ್ಷಿಸಿ ನೇಮಕ ಮಾಡಿಕೊಳ್ಳಬೇಕಾ?. ಕಾಂಗ್ರೆಸ್​ ಸರ್ಕಾರವು ಇಂತಹ ಮಸೂದೆ​ ಜಾರಿ ಮಾಡಲು ಮುಂದಾಗಿರುವುದು ನಂಬಲು ಅಸಾಧ್ಯ” ಎಂದಿದ್ದಾರೆ.

ಖಾಸಗಿ ಕಂಪನಿಗಳಲ್ಲಿ ರಾಜ್ಯದ ಸ್ಥಳೀಯರಿಗೆ ಅಂದರೆ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಬಗ್ಗೆ ಮಸೂದೆಗೆ ಕರ್ನಾಟಕ ಸಚಿವ ಸಂಪುಟ ಮಂಗಳವಾರ (ಜು.16) ಅನುಮೋದನೆ ನೀಡಿತ್ತು. ಆದರೆ ಇದಕ್ಕೆ ಉದ್ಯಮಿ ಮೋಹನ್​ ದಾಸ್​ ಪೈ  ಸೇರಿದಂತೆ ಇನ್ನೂ ಅನೇಕ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ “ಟೆಕ್​ ಹಬ್​ ಆಗಿ ನಮಗೆ ನುರಿತ ಪ್ರತಿಭೆಗಳ ಅಗತ್ಯವಿದೆ. ಸ್ಥಳೀಯರಿಗೆ ಉದ್ಯೋಗಗಳನ್ನು ಒದಗಿಸುವ ಗುರಿಯು ತಂತ್ರಜ್ಞಾನದಲ್ಲಿ ನಮ್ಮ ಪ್ರಮುಖ ಸ್ಥಾನದ ಮೇಲೆ ಪರಿಣಾಮ ಬೀರಬಾರದು. ಈ ನೀತಿಯಿಂದ ಹೆಚ್ಚು ನುರಿತ ನೇಮಕಾತಿಗೆ ವಿನಾಯಿತಿ ನೀಡುವ ಎಚ್ಚರಿಕೆಗಳು ಇರಬೇಕು ಎಂದು ಕಿರಣ್ ಮಜುಂದಾರ್ ಬಯೋಕಾನ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಕಿರಣ್ ಮುಜುಂದಾರ್ ಸಲಹೆ ನೀಡಿದ್ದಾರೆ.