News Karnataka Kannada
Friday, May 10 2024
ರಾಮನಗರ

ಸೆಕ್ಸಿ ಗೀತಾ ಹೆಸರಿನಲ್ಲಿ 41 ಲಕ್ಷ ರೂ. ವಂಚಿಸಿದ ಅವನಲ್ಲ ಅವಳು

Rs 41 lakh in the name of sexy Geeta. He is not the one who cheated
Photo Credit : News Kannada

ರಾಮನಗರ: ಇತ್ತೀಚೆಗೆ ಜಾಲತಾಣಗಳಲ್ಲಿ ಬ್ಲ್ಯಾಕ್‌ ಮೇಲ್‌ ಮಾಡಿ ವಂಚಿಸುವ ಘಟನೆಗಳು ಹೆಚ್ಚುತ್ತಿವೆ. ಅದೇರೀತಿ ಫೇಸ್‌ ಬುಕ್‌ ಸೇರಿದಂತೆ ಜಾಲತಾಣದಲ್ಲಿ ಸೆಕ್ಸಿ ಗೀತಾ ಹೆಸರಿನಲ್ಲಿ ಖಾತೆ ತೆರೆದು ಇತ್ತೀಚೆಗೆ ಹಾರೋಹಳ್ಳಿಯ ಯುವಕನಿಗೆ ವಂಚಿಸಿದ್ದ ಯುವಕನನ್ನು ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ರವಿಕುಮಾರ್‌(24) ಬಂಧಿತ ವ್ಯಕ್ತಿ. ಮೂಲತಃ ಕುಣಿಗಲ್‌ ತಾಲೂಕಿನ ಕಗ್ಗೇ ರಿಯ ನಿವಾಸಿಯಾಗಿದ್ದ ಈತ, ಬೆಂಗಳೂರಿನ ದಾಸರಹಳ್ಳಿಯ ಪಿಜಿಯೊಂದ ರಲ್ಲಿ ನೆಲೆಸಿದ್ದ. ಖಾಸಗಿ ಡಾಟಾಬೇಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ, ಸಾಮಾಜಿಕ ಜಾಲತಾಣ ಬಳಕೆ, ಆನ್‌ಲೈನ್‌ ತಂತ್ರಜ್ಞಾನದ ಬಗ್ಗೆ ಚೆನ್ನಾಗಿ ಪಳಗಿದ್ದ.

ಘಟನೆ ಹಿನ್ನೆಲೆ: ಫೇಸ್‌ಬುಕ್‌ನಲ್ಲಿ ಸೆಕ್ಸಿ ಗೀತಾ ಎಂಬ ಖಾತೆ ತೆರೆದು ಹಾರೋಹಳ್ಳಿಯ ರಾಜೇಶ್‌ನ ಸ್ನೇಹ ಬೆಳೆಸಿದ್ದ ರವಿಕುಮಾರ್‌, ಸುಂದರ ಹುಡುಗಿಯರ ಫೋಟೋ ಕಳುಹಿಸಿ, ನಿನಗೆ ಬೇಕಾದವರನ್ನು ಆಯ್ಕೆ ಮಾಡಿಕೋ ಎಂದು ಹೇಳಿ ಸ್ನೇಹ ಬೆಳೆಸಿಕೊಂಡಿದ್ದ. ಇದೇ ರೀತಿ ಬೇರೆ ಹುಡುಗರಿಗೂ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದ. ಕ್ರಮೇಣ ಸೆಕ್ಸ್‌ ಚಾಟ್‌ ಮಾಡುತ್ತಿದ್ದ. ಬಳಿಕ ಮೊಬೈಲ್‌ ನಂಬರ್‌ ಪಡೆದು ಗಂಟೆಗಟ್ಟಲೆ ಹುಡುಗಿಯರ ದನಿಯಲ್ಲಿ ಮಾತನಾಡುತ್ತಿದ್ದ. ಬಳಿಕ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್‌ ಜಾಲತಾಣದಲ್ಲಿ ಹಾಕಿ ಹಣ ನೀಡುವಂತೆ ಜನರಿಗೆ ವಂಚಿಸುತ್ತಿದ್ದ.

ಅದೇ ರೀತಿ ರಾಜೇಶ್‌ ಗೂ ಕೂಡ ವಂಚನೆ ಮಾಡಿದ್ದು, ರಾಜೇಶ್‌ ಹೆದರಿ 41 ಲಕ್ಷ ರೂ. ಹಣ ನೀಡಿದ್ದ. ನಂತರವೂ ಹಣ ನೀಡುವಂತೆ ಒತ್ತಾಯಿಸುತ್ತಿದ್ದು, ರೋಸಿ ಹೋದ ರಾಜೇಶ್‌, ಸೈಬರ್‌ಕ್ರೈಂ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದರು.

ವಂಚಿಸಿದ್ದು ಅವಳಲ್ಲ ಅವನು: ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸೆಕ್ಸಿಗೀತಾ ಫೇಸ್‌ಬುಕ್‌ ಖಾತೆ ಆಧಾರದ ಮೇಲೆ ರವಿಕುಮಾರ್‌ನನ್ನು ಬಂಧಿಸಿದ್ದಾರೆ. ನಂತರ ಸೆಕ್ಸಿಗೀತಾ ಅವಳಲ್ಲ, ಅವನು ಎಂಬುದು ಬೆಳಕಿಗೆ ಬಂದಿದೆ. ಈತನಲ್ಲಿ ಹುಡುಗಿಯರ ಲಕ್ಷಣಗಳೇ ಹೆಚ್ಚಾಗಿದ್ದು, ಮನೆಮಂದಿ ಮುಜುಗರಕ್ಕೆ ಒಳಗಾಗಿ ಈತನನ್ನು ದೂರ ಇಟ್ಟಿದ್ದರು ಎಂದು ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು