ದೇವನಹಳ್ಳಿ: ಮುಡಾ ಹಗರಣ ವಿರುದ್ಧ ಸಿಎಂ ಸಿದ್ದರಾಮಯ್ಯ. ಈಗಾಗಲೇ ಕಾನೂನು ಸಮರ ನಡೆಸುತ್ತಿದ್ದಾರೆ. ಹೋರಾಟಕ್ಕಿಳಿದ ಸಿಎಂಗೆ, ಸಚಿವರು, ಶಾಸಕರ ಬೆಂಬಲದ ಜೊತೆಗೆ ಹೈಕಮಾಂಡ್​ ಬೆಂಬಲವೂ ಸಿಕ್ಕಿದೆ. ಈ ಮಧ್ಯೆ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧ ರಾಜ್ಯದ ಶೋಷಿತ ವರ್ಗಗಳ ಮಹಾ ಒಕ್ಕೂಟ ಹಿಂದುಳಿದ ವರ್ಗದ ಅಲ್ಪಸಂಖ್ಯಾತರು ನಾಳೆ‌ ರಾಜಭವನ ಚಲೋಗೆ ಕರೆ ನೀಡಲಾಗಿದೆ.

ಈ ವಿಚಾರವಾಗಿ ದೇವನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಹೆಚ್ ಮುನಿಯಪ್ಪ,  ರಾಜ್ಯಮಟ್ಟದ ಸಂಘ ಸಂಸ್ಥೆಗಳು ನಾಳೆ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಾವು ಬೆಂಬಲ ಕೊಡುತ್ತೇವೆ. ಎಲ್ಲಾ ಶಾಸಕರು ಮಂತ್ರಿಗಳು ಕೂಡ ನಾಳೆ ರಾಜ ಭವನಕ್ಕೆ ಹೋಗಿ ನೀವು ಮಾಡುತ್ತಿರುವುದು ಸರಿನಾ ಅಂತ ರಾಜ್ಯಪಾಲರನ್ನು ಕೇಳುತ್ತೇವೆ ಎಂದಿದ್ದಾರೆ.