ಬೆಂಗಳೂರು : ಲೋಕಸಭಾ ಚುನಾವಣೆ ಮತ ಎಣಿಕೆ ಮಂಗಳವಾರ ನಡೆಯಲಿದ್ದು, ನಗರದ ಮೂರು ಮತ ಎಣಿಕೆ ಕೇಂದ್ರದ ಭದ್ರತೆ 1,500 ಪೊಲೀಸರು ನಿಯೋಜಿಸಲಾಗಿದೆ. ವಿಠಲ್ ಮಲ್ಯದ ರಸ್ತೆ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮತ ಎಣಿಕೆ ಕೇಂದ್ರದಲ್ಲಿ ಬೆಂ. ಉತ್ತರ, ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು ಕೇಂದ್ರದಲ್ಲಿ ಬೆಂ. ಕೇಂದ್ರ ಮತ್ತು ಜಯನಗರ 4ನೇ ಬ್ಲಾಕ್ ಎಸ್ಎಸ್ಎಂಆರ್ವಿ ಕಾಲೇಜು ಕೇಂದ್ರದಲ್ಲಿ ಬೆಂ. ದಕ್ಷಿಣ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ.
ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸುವ ನಿರೀಕ್ಷೆಯಿದ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪ್ರತಿ ಮ ಎಣಿಕೆ ಕೇಂದ್ರದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಡಿಸಿಪಿಗಳ ಮಾರ್ಗದರ್ಶನದಲ್ಲಿ ಎಸಿಪಿಗಳು, ಇನ್ಸ್ಪೆಕ್ಟಟರ್ಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುವರು.

