ಬೆಂಗಳೂರು : ಸ್ಯಾಂಡಲ್‌ವುಡ್‌ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಕೆ ಪ್ರಭಾಕರ್ ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು. ಕೆಲ ದಿನಗಳ ಹಿಂದಷ್ಟೇ ಹೃದಯಾಘಾತಕ್ಕೆ ಒಳಗಾಗಿದ್ದ ಕೆ ಪ್ರಭಾಕರ್​ ಅವರನ್ನು ಅಪೋಲೋ ಆಸ್ಪತ್ರೆ ಗೆ ದಾಖಲಿಸಿ  ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಪಲಿಸದೆ ಇಂದು ನಿಧನರಾಗಿದ್ದಾರೆ.

ಕನ್ನಡಕ್ಕೆ ಸೂಪರ್​ ಹಿಟ್ ಸಿನಿಮಾಗಳನ್ನ ಕೊಟ್ಟ ನಿರ್ಮಾಪಕರಾಗಿರುವ ಪ್ರಭಾಕರ್ ಅವರು ವಿಷ್ಣುವರ್ಧನ್​, ಉಪೇಂದ್ರ, ಅಂಬರೀಶ್, ಶಶಿಕುಮಾರ್​ ಅವರ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.  ಅವಳೇ ನನ್ನ ಗೆಳತಿ, ಮುದ್ದಿನ ಮಾವ, ತುಂಬಿದ ಮನೆ, ಸೋಲಿಲ್ಲದ ಸರದಾರ, ಮುಂತಾದ ಹಿಟ್ ಚಿತ್ರಗಳನ್ನು ನಿರ್ಮಿಸಿದವರಲ್ಲಿ ಕೆ.ಪ್ರಭಾಕರ್ ಕೂಡ ಒಬ್ಬರು.  ಶಿವರಾಜ್ ಕುಮಾರ್ ಮತ್ತು ರಾಧಿಕಾ ಕುಮಾರಸ್ವಾಮಿ ನಟನೆಯ ‘ಅಣ್ಣ – ತಂಗಿ’ ಚಿತ್ರಕ್ಕೂ ಇವರೇ ನಿರ್ಮಾಪಕರಾಗಿದ್ದರು. ಇದಲ್ಲದೆ ಗ್ಯಾಂಗ್ ಲೀಡರ್‌, ಸೇರಿದಂತೆ ಕನ್ನಡದಲ್ಲಿ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದು, ತೆಲುಗು ಚಿತ್ರರಂಗದಲ್ಲೂ ಕೂಡ ಹಲವು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.