ಬೆಂಗಳೂರು: ಮೆಜಸ್ಟಿಕ್ ಬಳಿಯ ಅಮರ್ ಹೋಟೆಲ್ ಬಳಿ ಬುಧವಾರ ರಾತ್ರಿ ನಿಲುಗಡೆ ಮಾಡಲಾಗಿದ್ದ ಖಾಸಗಿ ಬಸ್ವೊಂದರಲ್ಲಿ ಬೆಂಕಿ ಕಾನೀಸಿಕೊಂಡಿದ್ದು, ಬಸ್ ಬಹುತೇಕ ಭಸ್ಮವಾಗಿದೆ.
ಎಸ್.ಜೆ. ಕಂಫರ್ಟ್ ಹೆಸರಿನ ಖಾಸಗಿ ಬಸ್ ಅನ್ನು ನಿಲುಗಡೆ ಮಾಡಲಾಗಿತ್ತು. ಚಾಲಕ, ನಿರ್ವಾಹಕ ಹಾಗೂ ಕ್ಲೀನರ್ ಹೊರಹೋಗಿದ್ದರು. ಬಸ್ನಲ್ಲಿ ಪ್ರಯಾಣಿಕರು ಯಾರೂ ಇರಲಿಲ್ಲ. ಅದೇ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ.
ಸ್ಥಳದಲ್ಲಿದ್ದವರು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿದವು ಎಂದು ಮೂಲಗಳು ತಿಳಿಸಿವೆ.