ಬೆಂಗಳೂರು: ನಗರದ ದೇವಸ್ಥಾನಗಳಲ್ಲಿ ಮುಜುರಾಯಿ ಇಲಾಖೆ ಪೂಜೆಗಳನ್ನ ಆನ್ ಲೈನ್ ನಲ್ಲಿ ಮಾಡಿಸಲು ವ್ಯವಸ್ಥೆ ಮಾಡಿತ್ತು. ಆದರೆ ಆನ್ ಲೈನ್ ಪೂಜೆಯನ್ನ ಜಾರಿ ಮಾಡಿ ಕೆಲವೇ ತಿಂಗಳಲ್ಲಿ ಹಲವು ಸಮಸ್ಯೆಗಳು ತಲೆದೂರಿದ್ದು, ಅರ್ಚಕರ ಅಸೋಸಿಯೇಷನ್ ವತಿಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ದೇವಸ್ಥಾನಗಳಲ್ಲಿ ತಂದಿರುವ ಅನ್ ಲೈನ್ ವ್ಯವಸ್ಥೆ ಬಗ್ಗೆ ಅರ್ಚಕರ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿದೆ. ಮೂರು ತಿಂಗಳ ಹಿಂದೆ ಎ ಮತ್ತು ಬಿ ವರ್ಗದ ಮುಜುರಾಯಿ ದೇವಾಲಯಗಳಲ್ಲಿ ಅನ್ ಲೈನ್ ಪೂಜೆ ವ್ಯವಸ್ಥೆಯನ್ನ ಜಾರಿ ಮಾಡಲಾಗಿತ್ತು. ಇದರಲ್ಲಿ ವಿಶೇಷ ಪೂಜೆ, ಅರ್ಚನೆ, ಹೋಮ, ಪ್ರಸಾದ ಕುರಿತಾಗಿ ಬುಕಿಂಗ್ ವ್ಯವಸ್ಥೆಯನ್ನ ಮಾಡಲಾಗಿತ್ತು. ಆದರೆ ಈಗ ಜಾರಿ ಮಾಡಿರುವ ಅನ್ ಲೈನ್ ವ್ಯವಸ್ಥೆಯಿಂದಾಗಿ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗಿ ಹೋಗಿವೆ. ರಾತ್ರಿ 11 ಗಂಟೆಗೆ ಕರೆ ಮಾಡಿ ಬೆಳ್ಳಗ್ಗೆ ಅಭಿಷೇಕ ಮಾಡಬೇಕು ಅಂತರೇ. ಹೇಳಿದ ಸಮಯದಲ್ಲಿ ಹೋಮ ಮಾಡ್ಬೇಕು ಅಂತಾರೆ.
ಒಂದು ಕೆಜಿಯಷ್ಟು ಪ್ರಸಾದಕ್ಕೆ ಬುಕ್ ಮಾಡುತ್ತಾರೆ. ನಾವು ಮಾಡಿಕೊಟ್ಟಿಲ್ಲ ಅಂದ್ರೆ ಜಗಳ ಮಾಡುವುದಕ್ಕೆ ಶುರುಮಾಡ್ತಾರೆ. ಇದರಿಂದ ಪ್ರತಿದಿನ ಬೆಳಗ್ಗೆ ದೇವಸ್ಥಾನದಲ್ಲಿ ನಡೆಯುವ ಪೂಜೆಗಳಿಗೆ ಸಮಸ್ಯೆಯಾಗುತ್ತಿದೆ. ಆನ್ ಲೈನ್ ಮಾಡುವ ಪೇಮೆಂಟ್ಗಳು ಸರಿಯಾಗಿ ಆಗುತ್ತಿಲ್ಲ. ಇದರಿಂದ ಇಲಾಖೆಗೆ ನಷ್ಟವಾಗುತ್ತಿದೆ. ಹೀಗಾಗಿ ಆನ್ ಲೈನ್ ಆ್ಯಪ್ ಕೂಡಲೇ ಡಿಲೀಟ್ ಮಾಡಬೇಕು. ದೊಡ್ಡ ದೊಡ್ಡ ದೇವಸ್ಥಾನದಲ್ಲಿ ಆನ್ ಲೈನ್ ವ್ಯವಸ್ಥೆಯನ್ನ ನೋಡಿಕೊಳ್ಳುವುದಕ್ಕೇನೆ ಒಂದು ವಿಶೇಷ ತಂಡ ಇರುತ್ತೆ. ಆದರೆ ಎ ಮತ್ತು ಬಿ ವರ್ಗದ ದೇವಸ್ಥಾನಗಳಲ್ಲಿ ಕೇವಲ ಅರ್ಚಕರು ಮಾತ್ರ ಇರುತ್ತಾರೆ. ಇದರಿಂದ ಸಮಸ್ಯೆಯಾಗುತ್ತಿದೆ ಅಂತ ಅಖಿಲ ಕರ್ನಾಟಕ ಅರ್ಚಕರ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸುತ್ತಿದೆ.

