ಬೆಂಗಳೂರು: ಕೋರಮಂಗಲ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 39ನೇ ಎಸಿಎಂಎಂ ಕೋರ್ಟ್​​ಗೆ 1205 ಪುಟಗಳ ಚಾರ್ಜ್​​ಶೀಟ್​ ಅನ್ನು ಪೊಲೀಸರು ಸಲ್ಲಿಸಿದ್ದಾರೆ. 85 ಸಾಕ್ಷಿಗಳನ್ನು ಒಳಗೊಂಡ ಚಾರ್ಜ್​​ಶೀಟ್​ ಅನ್ನು ಪೊಲೀಸರು ಸಲ್ಲಿಸಿದ್ದಾರೆ.

85 ಸಾಕ್ಷಿಗಳನ್ನು ಒಳಗೊಂಡ ಚಾರ್ಜ್​​ಶೀಟ್​ ಅನ್ನು ಪೊಲೀಸರು ಸಲ್ಲಿಸಿದ್ದಾರೆ. ಜುಲೈ 24ರಂದು ಕೋರಮಂಗಲದ ಪಿಜಿಗೆ ನುಗ್ಗಿ ಕೃತಿಕುಮಾರಿ ಎಂಬ ಯುವತಿಯನ್ನು ಚಾಕುವಿನಿಂದ ಇರಿದು ಮಧ್ಯಪ್ರದೇಶದ ಬೇಗಂಗಂಜ್ ಮೂಲದ ಅಭಿಷೇಕ್ ಘೋಷಿ ಎಂಬಾತ ಹತ್ಯೆ ಮಾಡಿದ್ದ.

ಜುಲೈ 23ರ ರಾತ್ರಿ ಕೋರಮಂಗಲದಲ್ಲಿ ಲೇಡಿಸ್ ಪಿಜಿಯಲ್ಲಿ ನೆತ್ತರು ಹರಿದಿತ್ತು. ಪಿಜಿಗೆ ನುಗ್ಗಿದ್ದ ಅಭಿಷೇಕ್ ಘೋಷಿ ಕೃತಿ ಕುಮಾರಿ ಎಂಬ ಯುವತಿಯ ಕತ್ತು ಸೀಳಿ ಎಸ್ಕೇಪ್ ಆಗಿದ್ದ. ಬಳಿಕ ಕೋರಮಂಗಲ ಪೊಲೀಸರು ಆತನನ್ನು ಬಂಧಿಸಿದ್ದರು. ಇದೀಗ ಚಾರ್ಜ್​​ಶೀಟ್​ ಅನ್ನು ಪೊಲೀಸರು ಸಲ್ಲಿಸಿದ್ದಾರೆ.