ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ ಮತ್ತು ದರ್ಶನ್ ಸೇರಿದಂತೆ 17 ಮಂದಿ ಜೈಲು ಪಾಲಾಗಿದ್ದಾರೆ. ಇದೀಗ ಮನೆ ಮಹಜರು ಮಾಡಲು ಆರ್.ಆರ್ ನಗರದ ಮನೆಗೆ ಕರೆದುಕೊಂಡು ಹೋಗಿದ್ದಾಗ ಆರೋಪಿ ಪವಿತ್ರಾ ಗೌಡ ಲಿಪ್ಸ್ಸ್ಟಿಕ್ ಹಚ್ಚಿಕೊಂಡು ಮೇಕಪ್ ಮಾಡಿಕೊಂಡು ಬಂದಿದ್ದಕ್ಕೆ ವಿಜಯನಗರದ ಮಹಿಳಾ ಪಿಎಸ್‌ಐ ನೇತ್ರಾಗೆ ನೋಟಿಸ್ ನೀಡಲಾಗಿದೆ.
ಆರೋಪಿ ಪವಿತ್ರಾ ಗೌಡ ಜೂನ್ 15ರಂದು ಸ್ಥಳ ಮಹಜರು ಮಾಡಲೆಂದು ಆರ್.ಆರ್ ನಗರದಲ್ಲಿರುವ ಆಕೆಯ ಮನೆಗೆ ಬಂದಿದ್ದರು ಈ ವೇಳೆ ಪವಿತ್ರಾ ಗೌಡ ಲಿಪ್ಸ್ಸ್ಟಿಕ್ ಹಚ್ಚಿಕೊಂಡು, ಮುಖಕ್ಕೆ ಮೇಕಪ್ ಮಾಡಿಕೊಂಡು ಬಂದಿದ್ದರು. ಇದೀಗ ಪಿಎಸ್‌ಐ ಮಹಿಳಾ ಅಧಿಕಾರಿಗೆ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ನಾಯ್ಕ್ ಅವರು ನೋಟಿಸ್ ನೀಡಿದ್ದಾರೆ.

