ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಅಕ್ಟೋಬರ್ 1 ರಿಂದ ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಸೌಲಭ್ಯವನ್ನು ನಿಲ್ಲಿಸಲಿದೆ ಎಂದು ವರದಿಯಾಗಿದೆ.
ವಾರದಲ್ಲಿ ಐದು ದಿನಗಳ ಕಾಲ ಕಚೇರಿಗೆ ಹಾಜರಾಗುವಂತೆ ಉದ್ಯೋಗಿಗಳಿಗೆ ಕಂಪನಿ ತಿಳಿಸಿದೆ. ಕಂಪನಿ ತನ್ನ ಆಂತರಿಕ ಇಮೇಲ್ನಲ್ಲಿ, ವರ್ಕ್ ಫ್ರಂ ನೀತಿ ಅಂತ್ಯವಾಗಿರುವುದನ್ನು ಹೇಳಿದೆ.
ಆದಾಗ್ಯೂ, ಕಂಪನಿಯು ಕೆಲವಿಚಾರಗಳಲ್ಲಿ ಹೈಬ್ರಿಡ್ ನೀತಿಗಳನ್ನು ಮುಂದುವರಿಸುತ್ತದೆ. ಅಗತ್ಯವಿರುವಲ್ಲಿ ವಿನಾಯಿತಿಗಳನ್ನು ಮಾಡುತ್ತದೆ ಎಂದು ವರದಿಗಳು ಹೇಳಿವೆ.
ಟಿಸಿಎಸ್ ಕಂಪನಿಯು ಸುಮಾರು 615,318 ಉದ್ಯೋಗಿಗಳನ್ನು ಹೊಂದಿದೆ. ಪ್ರಸ್ತುತ ನೌಕರರು ವಾರದಲ್ಲಿ ಮೂರುದಿನ ಮಾತ್ರ ಕಚೇರಿಯಲ್ಲಿ ಕೆಲಸ ಮಾಡಬೇಕು ಎಂಬ ನಿಯಮವಿದೆ. ಉಳಿದಂತೆ ವರ್ಕ್ ಫ್ರಂ ಹೋಮ್ ಸೌಲಭ್ಯ ಪಡೆಯಬಹುದು. ಕೋವಿಡ್ -19 ಸಾಂಕ್ರಾಮಿಕದ ಮೊದಲ ಅಲೆಯ ಸಮಯದಲ್ಲಿ, TCS ನ ಆಗಿನ CEO, ರಾಜೇಶ್ ಗೋಪಿನಾಥನ್ ವರ್ಕ್ ಫ್ರಂ ಹೋಮ್ ಜಾರಿಗೊಳಿಸಿದ್ದರು.