News Karnataka Kannada
Monday, April 29 2024
ಬೆಂಗಳೂರು

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ಆಗಬೇಕು ಎಂದ ನಾರಾಯಣಮೂರ್ತಿ

Narayana Murthy calls for a significant change in the country's education system
Photo Credit : News Kannada

ಬೆಂಗಳೂರು: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ  ಅವರು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ಆಗಬೇಕು ಎಂದು ಹೇಳಿದ್ದಾರೆ.

ದೇಶದೆಲ್ಲೆಡೆ 2,500 ಟೀಚರ್ ಕಾಲೇಜುಗಳ  ಸ್ಥಾಪನೆಗೆ ಆಗಬೇಕು. ಶಿಕ್ಷಕರಿಗೆ ತರಬೇತಿ ಕೊಡುವ ಈ ಕಾಲೇಜುಗಳಿಗೆ 10,000 ನುರಿತ ಶಿಕ್ಷಕರನ್ನು ನೇಮಿಸಬೇಕೆಂದೂ ನಾರಾಯಣಮೂರ್ತಿ ಸಲಹೆ ನೀಡಿದ್ದಾರೆ.

ಈ 10,000 ನುರಿತ ಶಿಕ್ಷಕರು ದೇಶ ವಿದೇಶಗಳಿಂದ ಆಯ್ದ ನಿವೃತ್ತ ಹಾಗೂ ಪ್ರತಿಷ್ಠಿತ ಟೀಚರುಗಳಾಗಿರಬೇಕು ಎಂದಿದ್ದಾರೆ.

‘ನಾಲ್ಕು ಜನ ಟ್ರೈನರುಗಳ ತಂಡವೊಂದು ಒಂದು 100 ಪ್ರೈಮರಿ ಶಾಲೆ ಮತ್ತು 100 ಪ್ರೌಢಶಾಲೆಯ ಟೀಕಚರುಗಳಿಗೆ ತರಬೇತಿ ನೀಡಬಲ್ಲುದು. ಈ ರೀತಿಯಾಗಿ ನಾವು ಒಟ್ಟು 5 ಲಕ್ಷ ಟೀಚರುಗಳಿಗೆ ತರಬೇತಿ ನೀಡಬಹುದು. ಹೀಗೆ ತರಬೇತಿ ಪಡೆದ ಶಿಕ್ಷಕರು ಐದು ವರ್ಷದಲ್ಲಿ ಅವರೇ ಟ್ರೈನರುಗಳಾಗಿ ಕಾರ್ಯ ನಿರ್ವಹಿಸಬಹುದು’ ಎಂದು ಇನ್ಫೋಸಿಸ್​ನ ಮಾಜಿ ಛೇರ್ಮನ್ ಎನ್ ಆರ್ ನಾರಾಯಣಮೂರ್ತಿ ಹೇಳಿದ್ದಾರೆ.

ನಾರಾಯಣಮೂರ್ತಿ ಅವರ ಸಲಹೆಯಂತೆ ಶಿಕ್ಷಕರ ತರಬೇತಿಗೆ ಒಂದು ವರ್ಷಕ್ಕೆ ಒಂದು ಬಿಲಿಯನ್ ಡಾಲರ್ ಖರ್ಚಾಗುತ್ತದೆ. ಟೀಚರ್​ಗಳ ತರಬೇತಿ ಕೊಡುವ ಟ್ರೈನರುಗಳಿಗೆ ಒಂದು ವರ್ಷಕ್ಕೆ 1 ಲಕ್ಷ ಡಾಲರ್ (ಸುಮಾರು 83 ಲಕ್ಷ ರೂ) ಸಂಬಳ ಕೊಡಬೇಕು. 10,000 ಮಂದಿಗೆ 1 ಬಿಲಿಯನ್ ಡಾಲರ್ ವಾರ್ಷಿಕ ಸಂಭಾವನೆ ಕೊಡಬೇಕಾಗುತ್ತದೆ. ಈ ರೀತಿ 20 ವರ್ಷಕ್ಕೆ 20 ಬಿಲಿಯನ್ ಡಾಲರ್ ಖರ್ಚಾಗುತ್ತದೆ ಇದು ಭಾರತದಂತಹ ಆರ್ಥಿಕತೆಗೆ ದೊಡ್ಡ ಹಣಕಾಸು ಹೊರೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು