ಬೆಂಗಳೂರು: ವಾಲ್ಮಿಕಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಧಿತರಾಗಿರುವ ಮಾಜಿ ಸಚಿವ ಬಿ. ನಾಗೇಂದ್ರ ಕಸ್ಟಡಿ ಇಂದು ಅಂತ್ಯವಾಗುತ್ತಿದ್ದು, ಅವರನ್ನು ಮತ್ತೆ ಕೋರ್ಟ್ ಮುಂದೆ ಇಡಿ ಹಾಜರ್ ಪಡಿಸಲಿದೆ. ತನಿಖೆ ಇನ್ನಷ್ಟು ನಡೆಯಬೇಕಿರುವುದರಿಂದ ಮತ್ತೆ ಕಸ್ಟಡಿಗೆ ಕೇಳಲಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಇಂದು ಮಧ್ಯಾಹ್ನ 2 ಗಂಟೆಗೆ ನಾಗೇಂದ್ರ ಅವರನ್ನು ಇಡಿ ಹಾಜರು ಪಡಿಸಲಿದೆ. ವರನ್ನು ಇಡಿ ಹಾಜರು ಪಡಿಸಲಿದೆ. ಮತ್ತೆ ಮೂರರಿಂದ ನಾಲ್ಕು ದಿನಗಳ ಕಾಲ ಕಸ್ಟಡಿಗೆ‌ ಕೇಳುವ ಸಾಧ್ಯತೆ ಇದೆ. ನಾಗೇಂದ್ರರವರ ಇಬ್ಬರು ಪಿಎಗಳು, ನಾಗೇಂದ್ರರ ಪತ್ನಿ ಎಲ್ಲರ ಹೇಳಿಕೆಯನ್ನು ಪಡೆದಿರುವ ಇಡಿ, ಇನ್ನಷ್ಟು ವಿಚಾರಗಳನ್ನು ಹೊರತೆಗೆಯುವ ಅಗತ್ಯದಲ್ಲಿ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಿದೆ.