ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಗೆ ಅನುಸೂಯ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿ ಇದೆ. ಆದರೆ, ಯಾವುದೇ ಕಾರಣಕ್ಕೂ ಅನುಸೂಯ ಸ್ಪರ್ಧೆ ಮಾಡಲ್ಲ ಎಂದು ಬಿಜೆಪಿ ಸಂಸದ ಡಾ.ಸಿ.ಎನ್‌. ಮಂಜುನಾಥ್‌ ಸ್ಪಷ್ಟನೆ ನೀಡಿದ್ದಾರೆ.

ಚನ್ನಪಟ್ಟಣದಲ್ಲಿ ಪತ್ನಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನೂರಕ್ಕೆ ನೂರು ಪರ್ಸೆಂಟ್ ನನ್ನ ಪತ್ನಿ ನಿಲ್ಲಲ್ಲ. ಕೆಲವು ಪತ್ರಿಕೆ, ಮಾಧ್ಯಮದಲ್ಲಿ ಅನಸೂಯ ಸ್ಪರ್ಧಿಸುತ್ತಾರೆ ಎಂದು ಬಂದಿದೆ. ಇದು ನಮಗೆ ಬಹಳಷ್ಟು ಮುಜುಗರ ತರಿಸಿದೆ. ಅನುಸೂಯ ಯಾವುದೇ ಕಾರಣಕ್ಕೂ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ತಿಳಿಸಿದ್ದಾರೆ.