ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಅವರು ತಮ್ಮ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ಮತ್ತು ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಕಾನೂನು ಬಲೆಗೆ ಬಿದ್ದಿದ್ದಾರೆ.
ಈ ಹಿಂದೆ ಆರ್ಟಿಒ (RTO) ನಿಯಮ ಉಲ್ಲಂಘನೆಗಾಗಿ ಬರೋಬ್ಬರಿ 35 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದರೂ, ರಿಕ್ಕಿ ರೈ ಅವರು ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿಯಾಗಿ ‘ಡ್ರಿಫ್ಟಿಂಗ್’ ಮಾಡುವ ಮೂಲಕ ಮತ್ತೆ ನಿಯಮ ಮೀರಿದ್ದಾರೆ.
ನಕಲಿ ನಂಬರ್ ಪ್ಲೇಟ್ ಬಳಕೆಯ ಗಂಭೀರ ಆರೋಪದ ಮೇಲೆ ಪೊಲೀಸರು ಈಗ ಕಾರನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಶ್ರೀಮಂತ ವರ್ಗದ ಕಾರು ಕ್ರೇಜ್ ಮತ್ತು ಕಾನೂನು ಉಲ್ಲಂಘನೆಯ ಈ ಸುದ್ದಿ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

