Bengaluru 22°C
Ad

ಮುಸ್ಲಿಮರ ಶೇ.72ರಷ್ಟು ಮತಗಳು ಕಾಂಗ್ರೆಸ್‌ ಪಾಲಿಗೆ : ಬಿಜೆಪಿ ವಿರುದ್ಧ ಒಟ್ಟಾದ ಅಲ್ಪಸಂಖ್ಯಾತರು

ಬಿಜೆಪಿಯ ಜತೆ ಸೈದ್ಧಾಂತಿಕ ವಿರೋಧ ಇಟ್ಟುಕೊಂಡಿರುವ ಭಾರತದ ಮುಸ್ಲಿಮರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದಕ್ಕಾಗಿ ಒಟ್ಟಾಗಿ ‘ಕೈ’ ಜೋಡಿಸಿದ್ದಾರೆ.

ಬೆಂಗಳೂರು: ಬಿಜೆಪಿಯ ಜತೆ ಸೈದ್ಧಾಂತಿಕ ವಿರೋಧ ಇಟ್ಟುಕೊಂಡಿರುವ ಭಾರತದ ಮುಸ್ಲಿಮರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದಕ್ಕಾಗಿ ಒಟ್ಟಾಗಿ ‘ಕೈ’ ಜೋಡಿಸಿದ್ದಾರೆ. ಹೇಗಾದರೂ ಮಾಡಿ ಬಿಜೆಪಿ ನೇತೃತ್ವದ ಎನ್​ಡಿಎಯನ್ನು ಅಧಿಕಾರದಿಂದ ದೂರವಿರಿಸಿ ತಮಗೆ ಹೆಚ್ಚು ಅನುಕೂಲಕರ ಎನಿಸಿಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಪಣತೊಟ್ಟಿರುವುದು ಚುನಾವಣೋತ್ತರ ಸಮೀಕ್ಷೆಯಲ್ಲಿ ಪ್ರಕಟಗೊಂಡಿದೆ. ಸಮೀಕ್ಷೆಯು ಅಂದಾಜಿಸಿದ ಪ್ರಕಾರ ಮುಸ್ಲಿಂ ಸಮುದಾಯದವರು ಚಲಾವಣೆ ಮಾಡಿರುವ ಶೇಕಡಾ 72ರಷ್ಟು ಮತಗಳು ಕೈ ಪಕ್ಷದ ಪಾಲಾಗಿವೆ.

ಉತ್ತರ ಪ್ರದೇಶದ ಫರೂಕಾಬಾದ್​ನ್ಲಲಿ ಏಪ್ರಿಲ್ 29ರಂದು ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರ ಸೋದರ ಸೊಸೆ ಸಮಾಜವಾದಿ ಪಕ್ಷದ ನಾಯಕಿ ಮಾರಿಯಾ ಆಲಂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ವಿರುದ್ಧ “ವೋಟ್ ಜಿಹಾದ್” ಮಾಡಿ ಎಂದು ಭಾರತದ ಮುಸ್ಲಿಂ ಮತದಾರರಿಗೆ ಕರೆ ಕೊಟ್ಟಿದ್ದರು.

Ad
Ad
Nk Channel Final 21 09 2023
Ad