ಬೆಂಗಳೂರು: ಲೇಡೀಸ್​ ಪಿಜಿಗೆ ಚೂರಿಯೊಂದಿಗೆ ನುಗ್ಗಿದ ಯುವಕ ಯುವತಿಯೊಬ್ಬಳನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಮೃತ ಯುವತಿಯನ್ನ ಬಿಹಾರ ಮೂಲದ ಕೃತಿ ಕುಮಾರಿ‌ ಎಂದು ಗುರುತಿಸಲಾಗಿದೆ.

ಕೋರಮಂಗಲದ ವಿಆರ್ ಲೇಔಟ್​ನಲ್ಲಿರೋ ಪಿಜಿಯಲ್ಲಿ ರಾತ್ರಿ 11.10 ರಿಂದ 11.30 ಸುಮಾರಿಗೆ ಕೃತ್ಯ ನಡೆದಿದೆ. ಚಾಕುವಿನ ಜೊತೆಗೆ ಆಗಮಿಸಿದ್ದ ಯುವಕ, ಮೂರನೇ ಮಹಡಿಯಲ್ಲಿರುವ ರೂಂ ಸಮೀಪ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.

ಕೃತಿ ಕುಮಾರಿ‌ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಕೋರಮಂಗಲದ ಬಳಿ ಪಿಜಿಯಲ್ಲಿ ವಾಸವಿದ್ದಳು.ಕೃತಿ ಕುಮಾರಿ‌ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಕೋರಮಂಗಲದ ಬಳಿ ಪಿಜಿಯಲ್ಲಿ ವಾಸವಿದ್ದಳು.

ಪಿಜಿ ಮಾಲೀಕರ ನಿರ್ಲಕ್ಷ್ಯವೇ ಘಟನೆಗೆ ಪ್ರಮುಖ ಕಾರಣ ಎಂಬ ಆರೋಪವೂ ಕೇಳಿ ಬಂದಿದೆ. ಪರಿಚಯಸ್ಥ ಯುವಕನಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.