ದೇವನಹಳ್ಳಿ : ರಾಜ್ಯ ಕಾಂಗ್ರೆಸ್ ವಿರುದ್ಧ ಸಂಸದ ಡಾ.ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ಕಮಿಷನ್ ವ್ಯಾಪಾರ ಮಾಡುತ್ತಿಲ್ಲ, ಕಾಂಗ್ರೆಸ್ ಭಾಗಿದರರು. ಕಾಂಟ್ರಾಕ್ಟರ್ ಅರ್ಧ ಸಿಕ್ಕಿದ್ರೆ ಇನ್ನೂ ಅರ್ಧ ನಮಗೆ ಕೊಡಿ ಅಂತಿದ್ದಾರೆ ಎಂದರು.
ಯಾವುದೇ ಫೈಲ್ ಹೋದ್ರೆ, 100 ಬಂದ್ರೆ 50 ನೀನು ತಗೋ ಇನ್ನೂ 50 ನನಗೆ ಕೊಡು ಅಂತಿದ್ದಾರೆ. ಇದು ಭ್ರಷ್ಟಾಚಾರ ಅಲ್ಲ ಹಗಲು ದರೋಡೆ. ನಾನು ಆಪಾದನೆ ಮಾಡುತ್ತಿಲ್ಲ ರಾಜ್ಯದ ಜನ ಹೇಳುತ್ತಿದ್ದಾರೆ ಎಂದು ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ ಸಂಸದ ಡಾ.ಕೆ ಸುಧಾಕರ್ ಹೇಳಿಕೆ ನೀಡಿದ್ದಾರೆ.

