ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಜನರನ್ನ ಡೆಂಘೀ ಜ್ವರ ಕಾಡ್ತಿದೆ. ಇಡೀ ರಾಜ್ಯಕ್ಕೆ ಹೋಲಿಸಿದರೆ ಡೆಂಘೀ ಪ್ರಕರಣಗಳ ಸಿಂಹಪಾಲು ಬೆಂಗಳೂರಿನಲ್ಲೇ ದಾಖಲಾಗಿವೆ. ಈಗಾಗಲೇ ಡೆಂಘೀ ಜ್ವರದಿಂದ ಪರದಾಡುತ್ತಿರುವ ನಗರದ ಜನರಿಗೆ ಮತ್ತೊಂದು ಭೀತಿ ಶುರುವಾಗಿದೆ.
ಬೆಂಗಳೂರಿನಲ್ಲಿ ಡೆಂಘೀ ಆರ್ಭಟ ನಡೆಯುತ್ತಿದೆ. ಡೆಂಘೀಕಾರಕ ಲಾರ್ವ ತಡೆಗಟ್ಟಲು ಆರೋಗ್ಯ ಇಲಾಖೆ ಹರಸಾಹಸ ಪಡ್ತಿದೆ. ಆದರೂ ಕೂಡಾ ಸದ್ಯದ ಮಟ್ಟಿಗೆ ಡೆಂಘೀ ಹತೋಟಿಗೆ ಸಿಗ್ತಿಲ್ಲ. ಇದೆಲ್ಲದರ ನಡುವೆ ಸೈಲೆಂಟ್ ಆಗಿ ಚಿಕೂನ್ ಗುನ್ಯಾ ಹೆಚ್ಚಾಗ್ತಿದೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಈಗಾಗಲೇ ಚಿಕನ್ ಗುನ್ಯಾ ಕೇಸ್ ದಾಖಲಾಗ್ತಿವೆ.
ಜೂನ್ ತಿಂಗಳ 15 ರಂದು ರಾಜ್ಯದಲ್ಲಿ ಸುಮಾರು 814 ಚಿಕನ್ ಗುನ್ಯಾ ಕೇಸ್ ದಾಖಲಾಗಿದ್ದವು. ಬಿಬಿಎಂಪಿ ವ್ಯಾಪ್ತಿಯಲ್ಲೇ 123 ಕೇಸ್ ಇತ್ತು. ಇದೀಗ ಜುಲೈ 15ರಂದು ರಾಜ್ಯದಲ್ಲಿ 937 ಆಗಿವೆ, ಬಿಬಿಎಂಪಿ ವ್ಯಾಪ್ತಿಯಲ್ಲಿ 176 ಚಿಕನ್ ಗುನ್ಯಾ ಕೇಸ್ ದಾಖಲಾಗಿದೆ. ಒಂದು ತಿಂಗಳಲ್ಲಿ 300 ಪ್ರಕರಣಗಳು ಹೆಚ್ಚಾಗಿವೆ.

