ಬೆಂಗಳೂರು : ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ದಿನವಿಡೀ ತಂಪಾದ ವಾತಾವರಣವಿದ್ದು, ಅಲ್ಲಲ್ಲಿ ಸಾಧಾರಣ ಹನಿಮಳೆಯಾಗಲಿದೆ.
ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಒಣ ಹವಾಮಾನ ಕಂಡುಬರಲಿದೆ. ಹಗಲಿನಲ್ಲಿ ಸಾಧಾರಣ ಬಿಸಿಲು ಮತ್ತು ಸಾಯಂಕಾಲದ ವೇಳೆಗೆ ಭಾಗಶಃ ಮೋಡಕವಿದ ವಾತಾವರಣವಿರಲಿದ್ದು, ಕೆಲವು ಸ್ಥಳಗಳಲ್ಲಿ ತುಂತುರು ಮಳೆಯಾಗುವ ನಿರೀಕ್ಷೆಯಿದೆ.
ಬೆಳಗಿನ ಜಾವ ಚಳಿಯ ವಾತಾವರಣ ಇರಲಿದ್ದು, ಹಗಲಿನಲ್ಲಿ ಗರಿಷ್ಠ 28°C ತಾಪಮಾನ ದಾಖಲಾಗಲಿದೆ. ಮೈಸೂರು, ಮಂಡ್ಯ, ರಾಮನಗರ ಮತ್ತು ಹಾಸನ ಜಿಲ್ಲೆಗಳಲ್ಲಿ 26°C ಯಿಂದ 31°C ವರೆಗೆ ತಾಪಮಾನವಿರಲಿದೆ.
ಇನ್ನು, ಬೆಳಗಾವಿಯಲ್ಲಿ 26°C ತಾಪಮಾನವಿದ್ದರೆ, ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ 28°C ಇರಲಿದೆ. ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ, ರಾಯಚೂರು, ಕಲಬುರಗಿ ಮತ್ತು ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 32°C ತಲುಪಲಿದ್ದು, ಕೊಂಚ ಸೆಖೆಯ ಅನುಭವವಾಗಲಿದೆ ಎಂದು ಹೇಳಲಾಗಿದೆ.

