ಬೆಂಗಳೂರು: ಟೀ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕನನ್ನು ಹೆದರಿಸಿ, ಬೆದರಿಸಿ ಮನೆಯಲ್ಲಿ ಇರಿಸಿಕೊಂಡಿದ್ದ ಮಂಗಳಮುಖಿಯರು ಪ್ರಜ್ಞೆ ತಪ್ಪಿಸಿ ಆತನ ಮರ್ಮಾಂಗ ಕತ್ತರಿಸಿ, ಲಿಂಗ ಪರಿವರ್ತಿಸಿದ್ದಾರೆ. ಸುಲಭವಾಗಿ ಹಣ ಸಂಪಾದನೆ ಮಾಡುವ ದೃಷ್ಟಿಯಿಂದ ಇಂತಹ ಕೃತ್ಯ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಪುಲಿಕೇಶಿನಗರ ಠಾಣಾ ವ್ಯಾಪ್ತಿಯ ಫ್ರೆಜರ್ ಟೌನ್ ನಲ್ಲಿ 18 ವರ್ಷದ ಯುವಕನನ್ನ ಐವರು ಮಂಗಳ ಮುಖಿಯರ ಅಟ್ಟಹಾಸ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ಬಲವಂತವಾಗಿ ಹುಡುಗನೊಬ್ಬನಿಗೆ ಲಿಂಗ ಪರಿವರ್ತನೆ ಮಾಡಿಸಿರುವ ಆರೋಪ ಕೇಳಿ ಬಂದಿದೆ.
ಇತ್ತೀಚೆಗೆ ಈ ಮಂಗಳಮುಖಿಯರು ಯುವಕನಾಗಿಯೇ ಇಷ್ಟು ದುಡಿಯುತ್ತಿದ್ದಯಾ, ಹೆಣ್ಣಾದರೆ ಇನ್ನೂ ಎಷ್ಟು ಹಣವನ್ನು ಸಂಪಾದನೆ ಮಾಡಬಹುದು ಎಂದಿದ್ದಾರೆ. ಲಿಂಗ ಪರಿವರ್ತಿಸಿಕೊಂಡು ಹೆಣ್ಣಾಗು ಎಂದು ಬಲವಂತ ಮಾಡಿದ್ದಾರೆ. ಒಪ್ಪದೆ ಇದ್ದಾಗ ಗಾಂಜಾ ಸೇವಿಸಿ, ಮದ್ಯಪಾನ ಮಾಡಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ. ಬಳಿಕ ಬಲವಂತವಾಗಿ ಇಂಜೆಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸಿ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಯುವಕ ಎಚ್ಚರಗೊಂಡ ಲಿಂಗ ಪರಿವರ್ತನೆ ಮಾಡಿದ್ದಾರೆ. ಅಕ್ರಮವಾಗಿ ಲಿಂಗ ಪರಿವರ್ತನೆ, ಅಶ್ಲೀಲ ಫೋಟೊ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಿದ್ದಲ್ಲದೆ ಮನಬಂದಂತೆ ಥಳಿಸಿ ಚಿತ್ರ ಹಿಂಸೆ ಕೊಟ್ಟಿದ್ದಾರೆ.ಸದ್ಯ ಘಟನೆ ಸಂಬಂಧ ಪುಲಕೇಶಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇಸ್ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸ್ತಿದ್ದಾರೆ.

