ಬೆಂಗಳೂರು : ಹಾಡ ಹಗಲೇ ವ್ಯಕ್ತಿಯ ಮೇಲೆ ಡೆಡ್ಲಿ ಅಟ್ಯಾಕ್ ನಡೆದಿದ್ದು, ಕಿಡಿಗೇಡಿಗಳು ವ್ಯಕ್ತಿ ಒಬ್ಬನ ಮೇಲೆ 68 ಬಾರಿ ಮಚ್ಚಿನಿಂದ ಮರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆ ಬದಿಯಲ್ಲಿ ನಡೆದಿದೆ.
ಮಚ್ಚಿನಿಂದ ಹಲ್ಲೆಗೆ ಒಳಗಾದ ವ್ಯಕ್ತಿ ಕೆಳಗೆ ಬಿದ್ದರೂ ಸಹ ದುಷ್ಕರ್ಮಿಗಳು 68 ಬಾರಿ ಮಚ್ಚಿನಿಂದ ಮರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಮಾರ್ಚ್ 9 ರಂದು ಕೊಲೆ ಆರೋಪಿ ಸಂತೋಷ್ ಎಂಬಾತನ ಮೇಲೆ ಶರತ್ ಮತ್ತು ಗ್ಯಾಂಗ್ ಅಟ್ಯಾಕ್ ಮಾಡಿದ್ದು, ಭೀಕರವಾಗಿ ಕೊಲೆ ನಡೆಸಲಾಗಿದೆ.
ಮೋಹನ್ ಹಾಗೂ ಅಟ್ಯಾಕ್ ಮಾಡಿದಂತ ಶರತ್ ಇಬ್ಬರೂ ಕೂಡ ಸಹೋದರರಾಗಿದ್ದಾರೆ. ತನ್ನ ಸಹೋದರರ ಪ್ರತಿಕಾರವಾಗಿ ಶರತ್, ಸಂತೋಷ್ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಸಂತೋಷ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಪೊಲೀಸರು ಈ ಸಂಬಂಧ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

