ಬೆಂಗಳೂರು: ರಾಜ್ಯದ ಹಲವೆಡೆ ಇಂದು ಲೋಕಾಯುಕ್ತ ದಾಳಿ ನಡೆದಿದ್ದು, ಹಲವು ಅಧಿಕಾರಿಗಳ ಆಸ್ತಿ ಮೌಲ್ಯ ಪರಿಶೀಲನೆ ಮಾಡಲಾಗುತ್ತಿದೆ. ಕಾನೂನು ಮಾಪನ ಇಲಾಖೆ ಡೆಪ್ಯೂಟಿ ಕಂಟ್ರೋಲರ್ ಅತ್ಹರ್​ ಅಲಿ ಮನೆ ಮೇಲೂ ರೇಡ್ ಮಾಡಲಾಗಿದೆ.

ಲೋಕಾಯುಕ್ತ ರೇಡ್​ನ ವೇಳೆ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ಡೈಮಂಡ್ ನೆಕ್ಲೆಸ್‌ ಪತ್ತೆಯಾಗಿದೆ. ಕಲ್ಯಾಣನಗರದ HRBR ಲೇಔಟ್​ನಲ್ಲಿನ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಲೋಕಾಯುಕ್ತ ರೇಡ್​ ಆಗುತ್ತಿದ್ದಂತೆ ಅತ್ಹರ್​ ಅಲಿ ಅವರು ಪಕ್ಕದ ಮನೆಗೆ ಚಿನ್ನದ ಬ್ಯಾಗ್​ ಎಸೆದಿದ್ದಾರೆ. ಬ್ಯಾಗ್​ ಎಸೆದಾಗ ಶಬ್ಧ ಬಂದ ಹಿನ್ನೆಲೆ ಅಧಿಕಾರಿಗಳು ಅಲರ್ಟ್​ ಆಗಿದ್ದಾರೆ. ತಕ್ಷಣ ಪಕ್ಕದ ಮನೆಗೆ ತೆರಳಿ ಬ್ಯಾಗ್​ ವಶಕ್ಕೆ ಪಡೆದಿದ್ದಾರೆ.

25 ಲಕ್ಷ ನಗದು, 2.2 ಕೆ.ಜಿ ಚಿನ್ನಾಭರಣ, 2 ಕೆ.ಜಿ ಬೆಳ್ಳಿ ಸಾಮಗ್ರಿ, 40ಕ್ಕೂ ಹೆಚ್ಚು ವಾಚ್​ಗಳು, ವಿದೇಶಿ ನೋಟುಗಳು, ಡೈಮಂಡ್ ನೆಕ್ಲೆಸ್​ಗಳು ಪತ್ತೆಯಾಗಿದೆ.