ಬೆಂಗಳೂರು : ಆರ್​​ಸಿಬಿ ತಂಡದ ವಿಜಯೋತ್ಸವ ಸಂಭ್ರಮದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಕಾಲ್ತುಳಿತದಲ್ಲಿ 11 ಜನ ಆರ್​​ಸಿಬಿ ಅಭಿಮಾನಿಗಳ ಸಾವು ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರದ ಸ್ವಾರ್ಥ ಪ್ರಚಾರಕ್ಕಾಗಿ ಈ ದುರಂತ ಸಂಭವಿಸಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್ ಅವರೇ ಇದಕ್ಕೆ ನೇರಹೊಣೆ. ಸುಮ್ಮನೇ ಯಾಕೆ ಕಣ್ಣೀರು ಹಾಕ್ತೀರಿ.. ಸೆಲ್ಫೀ ತಗೊಂಡಿದ್ದೇ ತೊಗೊಂಡಿದ್ದು, ಮೊದಲು ಡಿಕೆಶಿ ರಾಜೀನಾಮೆ ನೀಡಲಿ ಎಂಬ ಜೆಡಿಎಸ್-ಬಿಜೆಪಿ ನಾಯಕರ ಆಗ್ರಹಕ್ಕೆ ಡಿಕೆಶಿ ಅವರು ಅಚ್ಚರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಬ್ಯಾಕ್​​ಗ್ರೌಂಡ್​ನಲ್ಲಿ ಯಾರು ಏನು ಮಾಡುತ್ತಾರೆ ಅಂತಾ ಗೊತ್ತಿದೆ. ನನಗೂ ಅರಿವಾಗುತ್ತದೆ. ಅವರು ಯಾವಾಗಲೂ ಜಂಟಿಯಾಗಿಯೇ ಹೆಣದ ಮೇಲೆ ರಾಜಕೀಯ ಮಾಡುತ್ತಾರೆ. ನಾವು ಮಾಡಲ್ಲ. ಅವರು ಯಾರ್ಯಾರು ಎಲ್ಲೆಲ್ಲಿ ಅತ್ತರೂ ಎಂದು ನನಗೂ ಗೊತ್ತಿದೆ. ಆರ್​​ಸಿಬಿ ಗೆಲುವನ್ನು ಎಲ್ಲರೂ ಸಂಭ್ರಮಿಸಿದ್ದಾರೆ. ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ನನ್ನ ರಾಜೀನಾಮೆ ಕೇಳುತ್ತಾರೆಂದರೆ ಕೊಡೋನಾ, ಅವರ ಆಸೆ ಈಡೇರಿಸೋಣ ಎಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

ಆರ್​​ಸಿಬಿ ವಿಜಯೋತ್ಸವ ಎಲ್ಲರ ಕನಸಾಗಿತ್ತು. ಜೆಡಿಎಸ್​-ಜೆಡಿಎಸ್​​ನವರೂ ಟ್ವೀಟ್ ಮಾಡಿದ್ದರು. ನಾವು ಅತ್ತರೆ ಡ್ರಾಮಾ ಅವರು ಅತ್ತರೆ ಅದಕ್ಕೆ ಅರ್ಥವೇನು ಎಂದು ಡಿಕೆಶಿ ಅವರು ಪ್ರಶ್ನಿಸಿದ್ದಾರೆ. ಇನ್ನು ಕಾಲ್ತುಳಿತ ಪ್ರಕರಣವನ್ನು ಈಗಾಗಲೇ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ವಹಿಸಿದೆ.