ಕಾರ್ಕಳ: ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ದಕ್ಷಿಣ ಕೊರಿಯಾದ ಸಿಯೋಲ್ ನಹನ್ಯಾಂಗ್ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಸುಂಗ್ ಕ್ಯೂ ಹಾ ಅವರು ‘ಮರುಬಳಕೆ ಮಾಡಬಹುದಾದ ಮತ್ತು ಕಡಿಮೆ ವೆಚ್ಚದ ಹೈಡ್ರೋಜನ್ ಅನಿಲ ಸಂಗ್ರಹಣೆ ಮತ್ತು ಪೈಪ್ಲೈನ್ಗಳ ಅಭಿವೃದ್ಧಿ’ ಕುರಿತು ಜು. 26 ರಂದು ಉಪನ್ಯಾಸ ನೀಡಿದರು.
ಸಂಪನ್ಮೂಲ ವ್ಯಕ್ತಿ ಮರುಬಳಕೆ ಮಾಡಬಹುದಾದ ಹೈಡ್ರೋಜನ್ ಅನಿಲ ಸಂಗ್ರಹಣೆ ಮತ್ತು ಪೈಪ್ ಲೈನ್ ಗಳ ಪ್ರಾಯೋಗಿಕ ಮತ್ತು ಸಿಮ್ಯುಲೇಶನ್ ತಂತ್ರಗಳ ಬಗ್ಗೆ ವಿವರಿಸಿದರು ಮತ್ತು ಭವಿಷ್ಯದ ಸಂಶೋಧನಾ ಕಾರ್ಯದ ವ್ಯಾಪ್ತಿಯ ಬಗ್ಗೆ ತಿಳಿಸಿದರು. ೫೦ ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಿನೀವೇಬಲ್ ಎನರ್ಜಿ ಕ್ಲಬ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

