News Karnataka Kannada
Thursday, May 02 2024
ಬೆಂಗಳೂರು

ಸಿಎಂ ಪುತ್ರನ ವಿಡಿಯೋ ಪ್ರಕರಣ: ಕಾಂಗ್ರೆಸ್  ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ

Kumaraswamy attacks Congress over CM's son's video
Photo Credit : News Kannada

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷಗಳು ವರ್ಗಾವಣೆ ದಂಧೆ, ಕಮಿಷನ್ ದಂಧೆ ಬಗ್ಗೆ ಸಿಎಂ, ಡಿಸಿಎಂ ವಿರುದ್ಧ ದಿನಕ್ಕೊಂದು ಆರೋಪ ಮಾಡುತ್ತಿವೆ. ಇದೆ ಸಮಯದಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಒಂದು ವಿಡಿಯೋ ವೈರಲ್ ಆಗಿದ್ದು, ಈ ಕುರಿತು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರು  ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್  ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಡಿಯೋದಲ್ಲಿ “ನಾನ್ ಹೇಳಿರೋ ಲಿಸ್ಟ್ ಫೈನಲ್ ಮಾಡಿ” ಎಂದು ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ  ಹೇಳಿರುವ ಸಂಭಾಷಣೆ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ಆಕ್ರೋಶ ಹೊರ ಹಾಕಿರುವ ಹೆಚ್‌.ಡಿ.ಕುಮಾರಸ್ವಾಮಿ ” ಯತೀಂದ್ರಗೆ ಫೋನ್ ಕರೆ ಮಾಡಿದ್ದು ಯಾರು? ಹಲೋ ಅಪ್ಪ ಅಂತಾ ಯತೀಂದ್ರ ಹೇಳಿದ್ದು ಯಾರಿಗೆ? ವಿವೇಕಾನಂದ ಯಾರು?. ನಾಲ್ಕೈದು ಲಿಸ್ಟ್​ ಕೊಟ್ಟಿದ್ದು ಏನು? ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಫೋನ್ ಮಾಡಿ ಕೇಳಿದ್ಯಾರು? ಅದು ಸಿಎಂ ಪರಿಹಾರ ನಿಧಿಯ ಹೆಸರುಗಳು. ಒಬ್ಬ ಮುಖ್ಯಮಂತ್ರಿ ಫೋನ್ ಮಾಡಿ ಲಿಸ್ಟ್ ಬಗ್ಗೆ ಮಾತಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ದೀಪಾವಳಿ ಆಚರಣೆ ನಂತರ ದಿನಕ್ಕೊಂದು ಸುದ್ದಿಗಳು ನಿಮಗೇ ಹುಡುಕಿಕೊಂಡು ಬರುತ್ತಿವೆ. ಹೆಚ್​ಡಿ ಕುಮಾರಸ್ವಾಮಿ ಮನೆಗೆ ಸಾರ್ವಜನಿಕ ಲೈಟ್ ಕಂಬದಿಂದ ವಿದ್ಯುತ್‌ ಕದ್ದಿದ್ದಾರೆ ಅಂತಾ ಕಾಂಗ್ರೆಸ್ ಮಹಾನ್ ನಾಯಕರು ಆರೋಪ ಮಾಡಿದರು . ಯಾರೋ ಮಾಡಿದ ಅಚಾತುರ್ಯಕ್ಕೆ ನಾನೇ ಅದರ ಹೊಣೆ ಹೊರುತ್ತೇನೆ ಅಂದಿದ್ದೇನೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು