ಬೆಂಗಳೂರು : ಕೆಎಸ್​ಆರ್​ಟಿಸಿ ಹಾಗೂ ಬಿಎಮ್‌ಟಿಸಿ ಬಸ್‌ನಿಂದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ,ನೌಕರಿಗೆ ಭಾರಿ ಮೊತ್ತದ ಪರಿಹಾರವನ್ನು ಘೋಷಿಸಲಾಗಿದೆ.ಅಮಾಯಕ ಬೈಕ್ ಸವಾರರು, ಪಾದಚಾರಿಗಳು ಆಕ್ಸಿಡೆಂಟ್​ನಲ್ಲಿ ಮೃತಪಟ್ಟವರ ಕುಟುಂಬಸ್ಥರು ಪರಿಹಾರ ಪಡೆಯಲು ಕೋರ್ಟ್ ಕಚೇರಿ ಅಂತ ವರ್ಷಗಟ್ಟಲೆ ಅಲೆದಾಡಬೇಕಿತ್ತು.

ಕೆಎಸ್ಆರ್​ಟಿಸಿ, ಬಿಎಂಟಿಸಿ ಬಸ್ ಆಕ್ಸಿಡೆಂಟ್​ನಿಂದ ಮೃತಪಟ್ಟವರಿಗೆ ಇನ್ಮುಂದೆ ಹತ್ತು ಲಕ್ಷ ರುಪಾಯಿ ಪರಿಹಾರ ನೀಡಲಾಗ್ತುತ್ತೆ. ಇತ್ತ ಕೆಎಸ್ಆರ್​ಟಿಸಿ, ಬಿಎಂಟಿಸಿ ಡ್ರೈವರ್ ಕಂಡಕ್ಟರ್​ಗಳು ಆಕ್ಸಿಡೆಂಟ್ ನಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೂ ಒಂದು ಕೋಟಿ ರುಪಾಯಿ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ.

ಈ ಹಿಂದೆ ಕೆಎಸ್ಆರ್ಟಿಸಿ- ಬಿಎಂಟಿಸಿ ಬಸ್ ನಿಂದ ಆಕ್ಸಿಡೆಂಟ್ ಆಗಿ ಮೃತಪಟ್ಟ ವಾಹನ ಸವಾರರು, ಪಾದಚಾರಿಗಳಿಗೆ ಕೇವಲ 25 ಸಾವಿರ ರುಪಾಯಿ ಪರಿಹಾರ ನೀಡಲಾಗ್ತಿತ್ತು, ಇಂದಿನಿಂದ ಹತ್ತು ಲಕ್ಷ ರುಪಾಯಿ ಪರಿಹಾರ ನೀಡಲಾಗುತ್ತದೆ. . ಈ ಹಿಂದೆ ಬಿಎಂಟಿಸಿ, ಕೆಎಸ್ಆರ್ಟಿಸಿ ಕಂಡಕ್ಟರ್ ಡ್ರೈವರ್ ಗಳು ಆಕ್ಸಿಡೆಂಟ್ ಆಗಿ ತೀರಿಕೊಂಡರೆ ಕೇವಲ ಮೂರು ಲಕ್ಷ ರುಪಾಯಿ ನೀಡಲಾಗ್ತಿತ್ತು. ಈಗ ಒಂದು ಕೋಟಿ ರುಪಾಯಿ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.