ಕೋಲಾರ: ಮಹಿಳೆಯ ಬುರ್ಕಾ ಕಬ್ಬಿನ ಹಾಲು ತೆಗೆಯುವ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್ಸನ್ ಪೇಟೆಯ 3ನೇ ಅಡ್ಡ ರಸ್ತೆಯಲ್ಲಿರುವ ತಹಶೀಲ್ದಾರ್ ಕಚೇರಿ ಬಳಿ ಈ ಘಟನೆ ನಡೆದಿದ್ದು, ಮೃತ ಕೌಸರ್ ಬೇಗ್(37) ಎಂದಿನಂತೆ ತಮ್ಮದೆ ಕಬ್ಬಿನ ಹಾಲು ಮಾರಾಟ ಮಾಡುವ ಅಂಗಡಿಗೆ ಬಂದಿದ್ದರು.
ಕಬ್ಬಿನ ಹಾಲು ತೆಗೆಯುವ ಯಂತ್ರ ಚಾಲನೆ ಮಾಡಿದ್ದ ವೇಳೆ ಆಕಸ್ಮಿಕವಾಗಿ ಬುರ್ಕಾ ಯಂತ್ರಕ್ಕೆ ಸಿಲುಕಿದೆ. ಈ ವೇಳೆ ಯಂತ್ರದಿಂದ ಬುರ್ಕಾ ಬಿಡಿಸಿಕೊಳ್ಳಲು ಸಾಧ್ಯವಾಗದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆಳಗ್ಗೆ ಘಟನೆ ನಡೆದಿದ್ದರಿಂದ ಅಂಗಡಿಯಲ್ಲಿ ಯಾರು ಜನ ಇರಲಿಲ್ಲ, ಹೀಗಾಗಿ ಕೌಸರ್ ಬೇಗ್ ರಕ್ಷಣೆಗೆ ಯಾರು ಧಾವಿಸಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ. ರಾಬರ್ಟ್ಸನ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.