ಕೋಲಾರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ ಚೈತ್ರಾ (26) ಮದುವೆ ಆರತಕ್ಷತೆಯ ವೇಳೆ ಕುಸಿದು ಬಿದ್ದು ಸಾವಿನ ಹೊಸ್ತಿಲಲ್ಲಿರುವ ಆತಂಕಕಾರಿ ಘಟನೆ ನಡೆದಿದ್ದು ದುರಂತದ ಸಮಯದಲ್ಲೂ ಆಕೆಯ ಅಂಗಾಂಗ ದಾನಕ್ಕೆ ಪಾಲಕರು ನಿರ್ಧರಿಸಿದ್ದಾರೆ.
ತಕ್ಷಣ ಆಕೆಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಣೆ ಮಾಡಿದ್ದು, ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಕೆ. ಸುಧಾಕರ್, 26 ವರ್ಷದ ಚೈತ್ರಾಗೆ ಇದು ದುರಂತದ ದಿನ. ಚೈತ್ರಾ ಬಾಳಲ್ಲಿ ವಿಧಿ ಬೇರೆ ಪ್ಲಾನ್ ಮಾಡಿರುವಂತೆ ಗೋಚರಿಸುತ್ತಿದೆ. ಮದುವೆ ಆರತಕ್ಷತೆ ವೇಳೆ ಕುಸಿದುಬಿದ್ದ ಚೈತ್ರಾರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ನಿಮ್ಹಾನ್ಸ್ ವೈದ್ಯರು ತಿಳಿಸಿದ್ದು, ಇಂತಹ ದುರಂತದ ಸಮಯದಲ್ಲೂ ಆಕೆಯ ಅಂಗಾಂಗ ದಾನಕ್ಕೆ ಪಾಲಕರು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.