ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ ತನ್ನ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಗಟ್ಟಿಗೊಳಿಸಲು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ತಂಡಗಳಿಗೆ ಕೆಎಂಎಫ್ ಪ್ರಾಯೋಜಕತ್ವ ನೀಡಲಿದೆ. ಟೂರ್ನಿಯಲ್ಲಿ ಈ ತಂಡಗಳ ಆಟಗಾರರು ಪಂದ್ಯದ ವೇಳೆ ‘ನಂದಿನಿ’ ಬ್ರ್ಯಾಂಡ್ ಅನ್ನು ಪ್ರದರ್ಶಿಸಲಿದ್ದಾರೆ.
ಕೆಎಂಎಫ್ನ ನಿರ್ವಾಹಕ ನಿರ್ದೇಶಕ ಎಂಕೆ ಜಗದೀಶ್ ಸ್ಪಾನ್ಸರ್ಶಿಪ್ ಕುರಿತು ದೃಢಪಡಿಸಿದ್ದಾರೆ. ‘ಸ್ಟಾಟ್ಲ್ಯಾಂಡ್ ಮತ್ತು ಐರ್ಲ್ಯಾಂಡ್ ತಂಡಗಳನ್ನು ಸ್ಪಾನ್ಸರ್ ಮಾಡುತ್ತಿದ್ದೇವೆ. ಆ ಆಟಗಾರರು ಪಂದ್ಯದ ವೇಳೆ ನಮ್ಮ ಬ್ರ್ಯಾಂಡ್ ಅನ್ನು ಪ್ರದರ್ಶಿಸಲಿದ್ದಾರೆ’ ಎಂದು ಜಗದೀಶ್ ಹೇಳಿದ್ದಾರೆ.