ಬೆಂಗಳೂರು: ಜಾಗತಿಕ ಅತ್ಯಂತ ಸಮಯಪಾಲನೆ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾನ ಪಡೆದುಕೊಂಡಿದೆ.
ವಾಯುಯಾನ ವಿಶ್ಲೇಷಣಾ ಸಂಸ್ಥೆ ಸಿರಿಯಮ್ನ ಆನ್-ಟೈಮ್ ಪರ್ಫಾರ್ಮೆನ್ಸ್ ಮಾಸಿಕ ವರದಿಯ ಪ್ರಕಾರ, ಜಾಗತಿಕ ವಿಮಾನ ನಿಲ್ದಾಣದ ಶ್ರೇಯಾಂಕದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕಳೆದ ಮೂರು ತಿಂಗಳಿಂದ ಅಗ್ರಸ್ಥಾನದಲ್ಲಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳ ಆನ್-ಟೈಮ್ ನಿರ್ಗಮನವು ಜುಲೈನಲ್ಲಿ ಶೇ 87.51ರಷ್ಟು ಆಗಿತ್ತು. ಆಗಸ್ಟ್ನಲ್ಲಿ ಶೇ 89.66, ಮತ್ತು ಸೆಪ್ಟೆಂಬರ್ನಲ್ಲಿ ಇದು ಶೇ 88.51 ರಷ್ಟಾಗಿತ್ತು. ಈ ಮೂಲಕ ಕೆಐಎ ಕಳೆದ ಮೂರು ತಿಂಗಳಲ್ಲಿ ಜಾಗತಿಕವಾಗಿ ಅತ್ಯಂತ ಸಮಯಪಾಲನೆ ವಿಮಾನ ನಿಲ್ದಾಣವಾಗಿ ಹೊರಹೊಮ್ಮಿದೆ. ಈ ಬಗ್ಗೆ ಸಿರಿಯಮ್ ಸಂಸ್ಥೆ 2023ರ ಸೆಪ್ಟೆಂಬರ್ನಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿದೆ.