News Karnataka Kannada
Sunday, May 12 2024
ಬೆಂಗಳೂರು

ಕರ್ನಾಟಕ ಶಿಶು ಮರಣ ಪ್ರಮಾಣ ಇಳಿಕೆ; ಆರೋಗ್ಯ ಇಲಾಖೆ ಮಾಹಿತಿ

ಇದೀಗ ಕರ್ನಾಟಕ ಶಿಶು ಮರಣ ಕುರಿತು ಆರೋಗ್ಯ ಇಲಾಖೆ ರಾಜ್ಯಕ್ಕೆ ಸಿಹಿ ಸುದ್ಧಿ ನೀಡಿದೆ. 2023ರ ಏಪ್ರಿಲ್ ನಿಂದ 2024ರ ಜನವರಿ ಅವಧಿಯ ದತ್ತಾಂಶವನ್ನು ಪರಿಗಣಿಸಿ ಇಲಾಖೆ ಮಾಹಿತಿ ನೀಡಿದ್ದು ನಾಲ್ಕು ವರ್ಷಗಳಲ್ಲಿ ಈ ಬಾರಿ ಅತೀ ಕಡಿಮೆ ಅಂಕಿಅಂಶ ವರದಿಯಾಗಿದೆ.
Photo Credit : News Kannada

ಬೆಂಗಳೂರು: ಇದೀಗ ಕರ್ನಾಟಕ ಶಿಶು ಮರಣ ಕುರಿತು ಆರೋಗ್ಯ ಇಲಾಖೆ ರಾಜ್ಯಕ್ಕೆ ಸಿಹಿ ಸುದ್ಧಿ ನೀಡಿದೆ. 2023ರ ಏಪ್ರಿಲ್ ನಿಂದ 2024ರ ಜನವರಿ ಅವಧಿಯ ದತ್ತಾಂಶವನ್ನು ಪರಿಗಣಿಸಿ ಇಲಾಖೆ ಮಾಹಿತಿ ನೀಡಿದ್ದು ನಾಲ್ಕು ವರ್ಷಗಳಲ್ಲಿ ಈ ಬಾರಿ ಅತೀ ಕಡಿಮೆ ಅಂಕಿಅಂಶ ವರದಿಯಾಗಿದೆ.

ರಾಜ್ಯ ಆರೋಗ್ಯ ಇಲಾಖೆ (Karnataka Health department) ಕೈಗೊಂಡಿರುವ ಹಲವು ಉಪಕ್ರಮಗಳ ಹಿನ್ನೆಲೆಯಲ್ಲಿ 2023ರ ಏಪ್ರಿಲ್ 1ರಿಂದ ಈ ವರ್ಷದ ಜನವರಿ 31ರವರೆಗೆ 10 ತಿಂಗಳ ಅವಧಿಯಲ್ಲಿ 4,546 ಮಂದಿ ಶಿಶು ಮರಣ ಪ್ರಕರಣಗಳು ವರದಿಯಾಗಿವೆ. ಈಗಿನ ಮಾಹಿತಿ ಪ್ರಕಾರ, ಶಿಶು ಮರಣ ಪ್ರಮಾಣ ಸುಮಾರು ಶೇ 40 ರಷ್ಟು ಕಡಿಮೆಯಾಗಿದ್ದು ಈ ಮೂಲಕ ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಇಳಿಕೆಯಾಗಿದೆ ಎಂಬುದು ಇಲಾಖೆ ತಿಳಿಸಿದೆ ಹಾಗೂ ಈ ವರ್ಷ ಫೆಬ್ರವರಿ ಮಾರ್ಚ್ ನ ದತ್ತಾಂಶವನ್ನು ಏಪ್ರಿಲ್‌ ನಲ್ಲಿ ಒಟ್ಟುಗೂಡಿಸಿ ಸಂಪೂರ್ಣ ಮಾಹಿತಿ ನೀಡುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
ಯಾವ ಎಷ್ಟು ಶಿಶು ಮರಣ ಎಂದು ನೋಡುವುದಾದರೆ;
2023-24ಕ್ಕೆ (ಜನವರಿ ಅಂತ್ಯದವರೆಗೆ) ಮೈಸೂರಿನಲ್ಲಿ 437, ಕೊಪ್ಪಳ (371), ರಾಯಚೂರು (365) ಮತ್ತು ಕಲಬುರಗಿಯಲ್ಲಿ (363) ಹೆಚ್ಚಿನ ಶಿಶು ಮರಣ ಪ್ರಕರಣ ದಾಖಲಾಗಿವೆ. ಹಾಗೂ ಮಂಡ್ಯ, ಚಾಮರಾಜನಗರ ಮತ್ತು ಕೊಡಗಿನಂತಹ ನೆರೆಯ ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಭವಿಸಿದ ಶಿಶುಗಳ ಮರಣವನ್ನೂ ಕೂಡ ಮೈಸೂರಿನ ವರದಿ ಒಳಗೊಂಡಿದೆ ಎಂದು ಮೈಸೂರು ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ ಬೆಂಗಳೂರಿನಲ್ಲಿ 8,ರಾಮನಗರದಲ್ಲಿ 13 ಮತ್ತು ಹಾವೇರಿಯಲ್ಲಿ 18 ಕನಿಷ್ಠ ಶಿಶು ಮರಣ ಸಂಭವಿಸಿವೆ.

ಇತ್ತೀಚೆಗೆ ವಿಧಾನಸಭೆಯಲ್ಲಿ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಪ್ರಸ್ತುತ 1,000 ಜನನಗಳಿಗೆ 14 ಆಗಿದೆ. 2020-21ರಲ್ಲಿ ಮೈಸೂರಿನಲ್ಲಿ 598 ಶಿಶು ಮರಣಗಳು ದಾಖಲಾಗಿದ್ದವು. 2021-22ರಲ್ಲಿ 695 ಇದ್ದು, 2022-23ರಲ್ಲಿ 578ಕ್ಕೆ ಇಳಿದಿದೆ ಎಂದು ತಿಳಿಸಿದ್ದರು.

ಮೈಸೂರು ಜಿಲ್ಲೆಯಲ್ಲಿ 1000 ಜನನಗಳಿಗೆ 10.5 ರಷ್ಟು ಇಳಿಕೆ ಯಾಗಿರುವುದರ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿ ಪಿಸಿ ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು