News Karnataka Kannada
Saturday, April 27 2024
ಬೆಂಗಳೂರು

‘ನನಗೆ ಕನ್ನಡ ಅಂದ್ರೆ ತುಂಬಾ ಇಷ್ಟ’ ಎಂದ ಕಪಿಲ್‌ ದೇವ್‌: ವಿಡಿಯೋ ವೈರಲ್‌

Kapil Dev says he loves Kannada, video goes viral
Photo Credit : News Kannada

ಬೆಂಗಳೂರು: ವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗ ಕಪಿಲ್ ದೇವ್ ಕನ್ನಡ ಮಾತನಾಡಿ ಗಮನ ಸೆಳೆದಿದ್ದಾರೆ. ಈ ಕುರಿತಂತೆ ಸಂಯುಕ್ತ ಹೊರನಾಡು ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ ಕಪಿಲ್ ದೇವ್, ‘ನನಗೆ ಕನ್ನಡ ಅಂದ್ರೆ ತುಂಬಾ ಇಷ್ಟ’ ಎಂದು ಸುಸ್ಪಷ್ಟವಾಗಿ ಕನ್ನಡದಲ್ಲೇ ಮಾತನಾಡಿದ್ದು, ಈ ವಿಡಿಯೋ ಕನ್ನಡಿಗರ ಮೆಚ್ಚುಗೆ ಪಾತ್ರವಾಗಿದೆ.

ಇತ್ತೀಚೆಗಷ್ಟೇ ಪಂದ್ಯದ ವೀಕ್ಷಣೆಗೆ ಅಹಮದಾಬಾದ್‌ಗೆ ಬರುವಂತೆ ಬಿಸಿಸಿಐ ತಮ್ಮನ್ನು ಆಹ್ವಾನಿಸಿರಲಿಲ್ಲ ಎನ್ನುವ ವಿಷಯವನ್ನು 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಬಹಿರಂಗಪಡಿಸಿ ಸುದ್ದಿಯಾಗಿದ್ದರು. ಸುದ್ದಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಪಿಲ್‌ರನ್ನು ನಿರೂಪಕ ನೀವೇಕೆ ವಿಶ್ವಕಪ್ ಫೈನಲ್ ವೀಕ್ಷಣೆಗೆ ಹೋಗಲಿಲ್ಲ ಎಂದು ಕೇಳಿದಾಗ, ‘ಅವರು ನನ್ನನ್ನು ಕರೆದಿಲ್ಲ ಅದಕ್ಕೆ ನಾನು ಹೋಗಿಲ್ಲ. ನೀವು ಆಹ್ವಾನಿಸಿದ್ದೀರ ಹಾಗಾಗಿ ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು