ಬೆಂಗಳೂರು: ರಾಜ್ಯದಲ್ಲಿ ಐಟಿ ಉದ್ಯೋಗಿಗಳ ಕೆಲಸ ಅವಧಿಯನ್ನು 12 ತಾಸಿಗಿಂತ ಹೆಚ್ಚು ಅಥವಾ 14 ತಾಸುಗಳಿಗೆ ವಿಸ್ತರಿಸುವ ಕುರಿತು ತಿದ್ದುಪಡಿ ತರಲು ಕರ್ನಾಟಕ ಸರ್ಕಾರವು‌ ಚಿಂತನೆ ನಡೆಸಿದ್ದು ಭಾರಿ ವಿರೋಧ ವ್ಯಕ್ತವಾಗಿದೆ. ಇದೀಗ ಐಟಿ ಉದ್ಯೋಗಿಗಳು ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ಪ್ರತಿಭಟನೆ ಆರಂಭಿಸಿದ್ದಾರೆ.

ಸೋಮವಾರದಿಂದ ಐಟಿ ಕಂಪನಿಗಳ ಎದುರು ಉದ್ಯೋಗಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಾದೇವಪುರ, ಎಲೆಕ್ಟ್ರಾನಿಕ್ ಸಿಟಿ, ಬುಕ್ ಫೀಲ್ಡ್ ಭಾಗದಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಐಟಿ ಉದ್ಯೋಗಿಗಳ ಕೆಲಸ ಅವಧಿಯನ್ನು 12 ತಾಸಿಗಿಂತ ಹೆಚ್ಚು ಅಥವಾ 14 ತಾಸುಗಳಿಗೆ ವಿಸ್ತರಿಸುವುದರಿಂದ ಕೆಲ ಉದ್ಯೊಗಿಗಳ ಕಲಸ ಕಳೆದುಕೊಳ್ಳಬೇಕಾಗಬಹುದು ಎಂದು ಪ್ರತಿಭಟನೆ ಆರಂಭಿಸಿದ್ದಾರೆ.