ಬೆಂಗಳೂರು: ಇಸ್ರೋ ಕಳುಹಿಸಿದ ಚಂದ್ರಯಾನ-3 ನೌಕೆ ಆಗಸ್ಟ್ 23ರಂದು ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಇಳಿದು ಭಾರತಕ್ಕೆ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಈ ಚಂದ್ರಯಾನದ ಯಶಸ್ಸಿನ ಹಿಂದೆ ಯಾರಿದ್ದಾರೆ? ಈ ಯೋಜನೆಯ ವಿಶೇಷತೆಗಳೇನು ಎಂಬುದೆಲ್ಲಾ ಸಾಕಷ್ಟು ಮಂದಿಗೆ ಕುತೂಹಲ ತರಿಸಿದ ವಿಷಯ. ಈ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ಮತ್ತು ಆಸಕ್ತಿ ಕೆರಳಿಸಲು ಹಾಗೂ ಜ್ಞಾನ ಪರೀಕ್ಷೆ ಮಾಡಲು ಇಸ್ರೋ ಕ್ವಿಜ್ ಕಾರ್ಯಕ್ರಮ ನಡೆಸುತ್ತಿದೆ. ಸೆ.1ರಿಂದಲೇ ಇಸ್ರೋ ಈ ಕ್ವಿಜ್ ನಡೆಸುತ್ತಿದ್ದು, ಇಲ್ಲಿಯವರೆಗೆ 16 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿರುವುದು ವಿಶೇಷ.
ಸರ್ಕಾರದ ಮೈ ಗವ್ ಡಾಟ್ ಇನ್ ವೆಬ್ಸೈಟ್ನಲ್ಲಿ (www.mygov.in) ಈ ಕ್ವಿಜ್ಗಾಗಿ ಮಿನಿ ಪೋರ್ಟಲ್ (isroquiz.mygov.in) ರಚಿಸಲಾಗಿದೆ. ಇಸ್ರೋ ಈ ಪೋರ್ಟಲ್ ಅನ್ನು ನಿರ್ವಹಿಸುತ್ತಿದ್ದು, ಚಂದ್ರಯಾನದ ರಸಪ್ರಶ್ನೆಗಳನ್ನು ರೂಪಿಸಿದೆ. ಈ ಕ್ವಿಜ್ನಲ್ಲಿ ಯಾವುದಾದರೂ 10 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಒಟ್ಟು 300 ಸೆಕೆಂಡುಗಳ ಕಾಲಾವಕಾಶ ಇರುತ್ತದೆ. 300ಕ್ಕೂ ಹೆಚ್ಚು ಮಂದಿಗೆ ಬಹುಮಾನ ನೀಡಲಾಗುತ್ತದೆ.
ಭಾರತದ ಯಾವುದೇ ನಾಗರಿಕರು ಈ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಬಹುದು. ಮೈ ಗವ್ ಡಾಟ್ ಇನ್ ವೆಬ್ಸೈಟ್ನ ಈ ಲಿಂಕ್ಗೆ ಭೇಟಿ ನೀಡಿ: isroquiz.mygov.in
ಇಲ್ಲಿ ಲಾಗಿನ್ ಆಗಬೇಕು. ನಿಮ್ಮ ಎಲ್ಲಾ ವಿವರವನ್ನು ಭರ್ತಿ ಮಾಡಿ ಪ್ರೊಫೈಲ್ ಪೂರ್ಣಗೊಳಿ, ಇಲ್ಲಿ 300 ಸೆಕೆಂಡ್ ಕಾಲಾವಕಾಶದಲ್ಲಿ 10 ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ಇಲ್ಲಿ ಸರಿಯಾಗಿ ಉತ್ತರಿಸಿದರೆ ಮೊದಲ ಬಹುಮಾನ: 1 ಲಕ್ಷ ರೂ., ಎರಡನೇ ಬಹುಮಾನ: 75,000 ರೂ., ಮೂರನೇ ಬಹುಮಾನ: 50,000 ರೂ., 100 ಮಂದಿಗೆ ಸಮಾಧಾನಕರ ಬಹುಮಾನ: 2,000 ರೂಹಾಗು 200 ಮಂದಿಗೆ ಸಮಾಧಾನಕರ ಬಹುಮಾನ: 1,000 ರೂ ಸಿಗಲಿದೆ.
India is on the moon!
Hear a special message from the @isro Chief to all Indians: Participate in the #Chandrayaan3MahaQuiz exclusively on @MyGov Let's celebrate this historic lunar landing together.
Visit https://t.co/6f8uxIbyAK#Chandrayaan3 #ISROQuiz pic.twitter.com/hxnzkJdYB8
— ISRO (@isro) September 25, 2023