ಬೆಂಗಳೂರು: ಕೆಲಸಗಾರರಾಗಿರಲಿ ಅಥವಾ ಇಂಟರ್ನ್‌ಶಿಪ್‌ ಮಾಡುವವರಾಗಿರಲಿ ಯಾವುದೇ ಕಂಪೆನಿಯನ್ನು ತೊರೆಯುವಾಗ ಕಂಪೆನಿಯ ಒಂದಷ್ಟು ಪ್ರಕ್ರಿಯೆಗಳನನ್ನು ಪಾಲಿಸಬೇಕಾಗುತ್ತದೆ. ಆದ್ರೆ ಇಲ್ಲೊಂದು ಇಂಟರ್ನ್‌ ಸ್ವಂತ ಸ್ಟಾರ್ಟ್‌ ಅಪ್‌ ನಡೆಸಲು ಹಣ ಸಿಗುತ್ತಿದ್ದಂತೆ, ಇಷ್ಟು ದಿನ ಕೆಲಸ ಕಲಿಯಲು ಅವಕಾಶ ಕೊಟ್ಟ ಕಂಪೆನಿಯ ಬಾಸ್‌ಗೆ ಒಂದು ಮಾತು ಹೇಳದೆ ಏಕಾಏಕಿ ಕೆಲಸ ಬಿಟ್ಟಿದ್ದಾನೆ. ಹೌದು. . ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇಂಟರ್ನ್‌ ಸ್ಟರ್ಟ್‌ಅಪ್‌ ನಡೆಸಲು ಧನ ಸಹಾಯ ಸಿಗುತ್ತಿದ್ದಂತೆ, ಇಷ್ಟು ದಿನ ಕೆಲಸ, ಕೌಶಲ್ಯಗಳನ್ನು ಕಲಿಯಲು ಅವಕಾಶ ಕೊಟ್ಟ ಕಂಪೆನಿಯ ಬಾಸ್‌ಗೆ ಒಂದು ಮಾತು ಹೇಳದೆ ಏಕಾಏಕಿ ಕೆಲಸ ಬಿಟ್ಟಿದ್ದು, ಇನ್ಮುಂದೆ ನನಗೆ ನಿಮ್ಮ ಇಂಟರ್ನ್‌ಶಿಪ್‌ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇಂಟರ್ನ್‌ ಹಾಗೂ ಬಾಸ್‌ ಮಧ್ಯೆ ನಡೆದ ಈ ವಾಟ್ಸಾಪ್‌ ಚಾಟ್‌ ಇದೀಗ ವೈರಲ್‌ ಆಗಿದ್ದು, ಸ್ಟಾರ್ಟ್‌ ಅಪ್‌ ನಡೆಸುವ ಮುನ್ನ ಒಬ್ಬರ ಜೊತೆ ಹೇಗೆ ಮಾತಾಡಬೇಕು ಎಂಬುದು ಆತ ಕಲಿಯಬೇಕಿದೆ ಎಂದು ನೆಟ್ಟಿಗರು ಹೇಳಿದ್ದಾರೆ.

ಕಾರ್ತಿಕ್‌ ಶ್ರೀಧರನ್ ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಬೆಂಗಳೂರಿನಲ್ಲಿ ಮಾತ್ರ ನಡೆಯಲು ಸಾಧ್ಯ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌ ಆಗಿರುವ ವಾಟ್ಸಾಪ್‌ ಚಾಟ್‌ ಸ್ಕ್ರೀನ್‌ಶಾಟ್‌ ಫೋಟೊದಲ್ಲಿ ಕಂಪೆನಿ ಬಾಸ್‌ ಮತ್ತು ಇಂಟರ್ನ್‌ ಮಧ್ಯೆ ನಡೆದ ಸಂಭಾಷಣೆಯ ದೃಶ್ಯವನ್ನು ಕಾಣಬಹುದು. ಇಂಟರ್ನ್‌ ಕೆಲಸದ ಸಮಯದಲ್ಲಿ ಆಫೀಸ್‌ನಲ್ಲಿ ಕಾಣಿಸಿಕೊಳ್ಳದಿದ್ದಾಗ, ಬಾಸ್‌ ಡೈರೆಕ್ಟ್‌ ಆಗಿ ಇಂಟರ್ನ್‌ಗೆ ಮೆಸೇಜ್‌ ಮಾಡಿ ನಿಮಗೆ ಏನಾಯಿತು? ಕಳೆದ ಶುಕ್ರವಾರದಿಂದ ನೀವು ಆಫೀಸಿನಲ್ಲಿ ಕಾಣಿಸಿಕೊಳ್ಳಲೇ ಇಲ್ಲ ಎಂದು ಹೇಳಿದ್ದಾರೆ. ಇದ್ದಕ್ಕೆ ಉತ್ತರಿಸಿದ ಇಂಟರ್ನ್ನ ಕ್ಷಮಿಸಿ, ನನಗೆ ಸ್ಟಾರ್ಟ್‌ ಅಪ್‌ ನಡೆಸಲು ಧನ ಸಹಾಯ ಸಿಕ್ಕಿತು. ಹಾಗಾಗಿ ಇನ್ನು ಮುಂದೆ ನನಗೆ ಇಂಟರ್ನ್‌ಶಿಪ್‌ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

— Karthik Sridharan (@KarthikS2206) September 1, 2024