ಬೆಂಗಳೂರು : ಮೇ ತಿಂಗಳಲ್ಲಿ, ಬೆಂಗಳೂರಿನ ವ್ಯಕ್ತಿಯೊಬ್ಬ ತನ್ನ ಶೂ ರ್ಯಾಕ್ ಅನ್ನು ಎಂಟು ತಿಂಗಳ ಕಾಲ ಸಾಮಾನ್ಯ ಪ್ರದೇಶದಲ್ಲಿ ಇರಿಸಿದ್ದಕ್ಕಾಗಿ ಹೌಸಿಂಗ್ ಸೊಸೈಟಿಯು 24,000 ರೂ. ದಂಡ ವಿಧಿಸಿತ್ತು. ಇದೀಗ ಇದರ ಬೆನ್ನಲ್ಲೇ ಜೆಪಿ ನಗರದಲ್ಲಿ ಚಪ್ಪಲಿ ಹೊರಗಿಟ್ಟಿದ್ದಕ್ಕೆ ದಂಡ ವಿಧಿಸಲಾಗಿದೆ.

ನಗರದ ಕನಕಪುರ ರಸ್ತೆಯ ಅಪಾರ್ಟ್‌ಮೆಂಟ್‌ನ ನಿವಾಸಿಯೊಬ್ಬರಿಗೆ ಶೂ ಅನ್ನು ಮನೆಯ ಹೊರಗೆ ಇರಿಸಿದ್ದಕ್ಕೆ ನೂರು ರೂಪಾಯಿ ದಂಡ ವಿಧಿಸಲಾಗಿದೆ. ಇದೀಗ ಈ ಅಪಾರ್ಟ್ ಮೆಂಟ್ ಗಳ ಈ ಕಾನೂನನ್ನು ನಿವಾಸಿಗಳು ಖಂಡಿಸಿದ್ದಾರೆ.

ಅನೇಕ ಅಪಾರ್ಟ್‌ಮೆಂಟ್‌ಗಳಲ್ಲಿ, ವಿಶೇಷವಾಗಿ COVID-19 ಸಾಂಕ್ರಾಮಿಕ ರೋಗದ ನಂತರ, ಶೂ ರ‍್ಯಾಕ್‌ಗಳನ್ನು ಹೊರಗೆ ಇಡುವುದರಿಂದ ಮನೆಯಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ನಿವಾಸಿಗಳು ಹೇಳುತ್ತಾರೆ.

ಆದರೆ ಮನೆಯ ಬಾಗಿಲ ಮುಂದೆ ಚಪ್ಪಲಿ ಇಟ್ಟರೆ ಮನೆಯಲ್ಲಿ ನೆಗಟಿವ್ ವೈಬ್ ಜೊತೆ ಸಂಸ್ಕೃತಿ ಹಾಳಾಗುತ್ತದೆ ಎಂಬ ನಂಬಿಕೆಯ ಹಿನ್ನಲೆ ಅಪಾರ್ಟ್ ಮೆಂಟ್ ನಲ್ಲಿ ಹೌಸಿಂಗ್ ಸೊಸೈಟಿಗಳು ನಿವಾಸಿಗಳಿಗೆ ದಂಡದ ಬರೆ ಎಳೆಯುತ್ತಿದ್ದಾರೆ.