ಬೆಂಗಳೂರು: ಪವಿತ್ರಾ ಗೌಡ ಜತೆ 10 ವರ್ಷಗಳಿಂದ ಲಿವ್‌-ಇನ್‌ ರಿಲೇಷನ್‌ಶಿಪ್‌ನಲ್ಲಿ ಇರೋದಾಗಿ ನಟ ದರ್ಶನ್​ ಒಪ್ಪಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೇಸ್​ ಸಂಬಂಧ ಕೋರ್ಟ್‌ಗೆ ಸಲ್ಲಿಕೆಯಾದ ಚಾರ್ಜ್​ಶೀಟ್​ ಪ್ರತಿಯಲ್ಲಿ ದರ್ಶನ್‌ ಪವಿತ್ರಾ ಗೌಡ ಜೊತೆಗಿನ ಸಂಬಂಧದ ಹೀಗೆ ಹೇಳಿಕೆ ನೀಡಿದ್ದಾರೆ.

ಪವಿತ್ರಾಗೌಡ ಜೊತೆ 10 ವರ್ಷಗಳಿಂದ ನಾನು ಲೀವ್-ಇನ್ ರಿಲೇಷನ್‌ಷಿಪ್‌ನಲ್ಲಿ ಇದ್ದೇನೆ. ಆರ್​​.ಆರ್​ ನಗರದಲ್ಲಿ ನನ್ನ ಮನೆಯಿಂದ ಒಂದೂವರೆ ಕಿಲೋ ಮೀಟರ್​ ದೂರದಲ್ಲಿ ಪವಿತ್ರಾ ಗೌಡ ನೆಲೆಸಿದ್ದಾರೆ ಎಂದರು.

ನನಗೆ ಸೌಂದರ್ಯ ಜಗದೀಶ್ ಸುಮಾರು 10 ವರ್ಷಗಳಿಂದ ಪರಿಚಯ. 2018 ರಲ್ಲಿ ನಾನು ಸೌಂದರ್ಯ ಜಗದೀಶ್‌ ನಡೆಯಿಂದ 1.75 ಕೋಟಿ ರೂ. ಸಾಲ ಪಡೆದು ಪವಿತ್ರಾ ಗೌಡಗೆ ಮನೆ ಖರೀದಿ ಮಾಡಿಕೊಟ್ಟೆ. ಈ ಹಣವನ್ನು ನಾನು ಪವಿತ್ರಾ ಬ್ಯಾಂಕ್‌ ಖಾತೆಗೆ ನೇರ ವರ್ಗಾವಣೆ ಮಾಡಿದ್ದೆ. 2 ವರ್ಷದ ಹಿಂದೆಯೇ ಈ ಸಾಲವನ್ನು ತೀರಿಸಿದ್ದೇನೆ ಎಂದರು.