ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದ್ದು, ಈ ನಡುವೆ ನಾನು ಕೂಡ ಸಿಎಂ ಆಕಾಂಕ್ಷಿಯಾಗಿದ್ದೇನೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್, ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆಯ ವಿಚಾರಕ್ಕೆ ಸಂಬಂಧಪಟ್ಟಂತೆ, ನಾನು ಕೂಡ ಸಿಎಂ ಆಕಾಂಕ್ಷಿ ನನಗೂ ಸಿಎಂ ಆಗುವ ಆಸೆ ಇದೆ. ಆದರೆ ಈ ಸಂದರ್ಭ ಆ ರೀತಿ ಇಲ್ಲ ಸಿಎಂ ಬದಲಾವಣೆಯನ್ನು ವಿಚಾರ ಬಂದಾಗ ಆ ಕುರಿತು ವಿಚಾರ ಮಾಡೋಣ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದರು.
ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿರ್ತೀನಿ ಅಂತ ಹೇಳಿದ್ದಾರೆ. ಎರಡುವರೆ ವರ್ಷದ ಹಿಂದೆ ಸಿಎಲ್‍ಸಿ ಸಭೆಯಲ್ಲಿ ಆಯ್ಕೆಯಾಗಿದ್ದರು ಈ ನಡುವೆ ಬದಲಾವಣೆ ಮಾಡುವುದು ಹೈಕಮಾಂಡ್ಗೆ ಬಿಟ್ಟಿದ್ದು ಈಗ ಸಿಎಂ ಬದಲಾವಣೆ ಮಾಡುತ್ತಾರೆ ಅಂತ ನನಗೇನು ಅನಿಸುತ್ತಿಲ್ಲ ಎಂದು ಪರಂ ಹೇಳಿದರು. ಹೈ ಕಮಾಂಡ್ ತೀರ್ಮಾನವೆ ಅಂತಿಮ ಎಂದು ತಿಳಿಸಿದರು.

